ನವದೆಹಲಿ: ಮೆಡಿಟರೇನಿಯನ್‌ನಲ್ಲಿ ನಾಪತ್ತೆಯಾಗಿದ್ದ ಈಜಿಪ್ಟ್ ವಿಮಾನದ ಅವಶೇಷಗಳು ಗುರುವಾರ ಗ್ರೀಕ್ ದ್ವೀಪದಲ್ಲಿ ಪತ್ತೆಯಾಗಿದೆ ಎಂದು ಗ್ರೀಕ್ ಮಿಲಿಟರಿ ವಕ್ತಾರ ಹೇಳಿದ್ದಾರೆ.
ಗ್ರೀಕ್ ದ್ವೀಪದಲ್ಲಿ ಈಜಿಪ್ಟ್ ವಿಮಾನದ ಅವಶೇಷಗಳು ತೇಲುತ್ತಿದ್ದು, ಅವುಗಳನ್ನು ತೆಗೆಯುವುದಕ್ಕಾಗಿ ಹಡಗನ್ನು ಕಳುಹಿಸಲಾಗಿದೆ.
ಕ್ರೇಟ್‌ನಿಂದ 425 ಕಿಮೀ ದೂರದಲ್ಲಿ ಈ ವಿಮಾನ ಕೊನೆಯ ಬಾರಿ ಕಾಣಿಸಿಕೊಂಡಿತ್ತು. ನಾಪತ್ತೆಯಾಗುವ ಮುನ್ನ ವಿಮಾನದಿಂದ ಯಾವುದೇ ರೀತಿಯ ಕರೆಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ.
66 ಪ್ರಯಾಣಿಕರನ್ನು ಹೊತ್ತ ಏರ್‌ಬಸ್ ಎ320 ಪತನಗೊಂಡಿದೆ ಎಂಬ ಸುದ್ದಿಯನ್ನು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್ ಗುರುವಾರ ದೃಢೀಕರಿಸಿದ್ದರು.
ಎಂಎಸ್ 804 ಏರ್‌ಬಸ್ ಎ320 ವಿಮಾನ ಪ್ಯಾರಿಸ್ ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಿಂದ 23:09 ಗಂಟೆಗೆ ಕೈರೋದತ್ತ ಪ್ರಯಾಣ ಬೆಳಸಿತ್ತು. ಈ ವಿಮಾನ ಸಮುದ್ರ ಮಟ್ಟದಿಂದ 37000 ಅಡಿ ಎತ್ತರಲ್ಲಿ ಹಾರುತ್ತಿದ್ದ ವೇಳೆ ರಾಡಾರ್ ನಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಬುಧರ ಮೆಡಿಟರೇನಿಯನ್ ಬಳಿ ಇದು ಸಂಪರ್ಕ ಕಡಿದುಕೊಂಡಿದ್ದು ವಿಮಾನ ಪತನವಾಗಿರುವ ಬಗ್ಗೆ ಗುರುವಾರ ಮಾಹಿತಿ ಲಭಿಸಿತ್ತು.
ಈ ವಿಮಾನಲ್ಲಿ ಒಟ್ಟು 56 ಪ್ರಯಾಣಿಕತರು ಮತ್ತು 10 ವಿಮಾನದ ಸಿಬ್ಬಂದಿಗಳು ಇದ್ದರು. ವಿಮಾನ 804 ನಲ್ಲಿ 30 ಈಜಿಪ್ಟಿಯನರ್, 15 ಫ್ರೆಂಚರು, ಇಬ್ಬರು ಇರಾಖ್ ಮತ್ತು ಅಲ್ಜೇರಿಯಾ, ಬ್ರಿಟನ್, ಬೆಲ್ಜಿಯಂ, ಕೆನಡಾ, ಚಾಡ್, ಕುವೈತ್, ಪೋರ್ಚುಗಲ್, ಸೌದಿ ಅರೇಬಿಯಾ ಮತ್ತು ಸುಡಾನ್‌ನ ಒಬ್ಬೊಬ್ಬ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ.