ಇಸ್ಲಾಮಾಬಾದ್/ವಾಷಿಂಗ್ ಟನ್: ಪಾಕಿಸ್ತಾನ- ಅಪ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಅಮೆರಿಕ ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಉಗ್ರ ಸಂಘಟನೆ ಮುಖಂಡ ಮುಲ್ಲಾ ಮನ್ಸೂರ್ ಹತ್ಯೆಯಾಗಿದ್ದಾರೆ ಎಂಬ ವರದಿಗಳನ್ನು ಪಾಕಿಸ್ತಾನ ಮಾಧ್ಯಮ ತಳ್ಳಿಹಾಕಿವೆ,
ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದು, ಮುಲ್ಲಾ ಮನ್ಸೂರ್ ಅಲ್ಲ ಓರ್ವ ಟ್ಯಾಕ್ಸಿ ಚಾಲಕ ಹಾಗೂ ಪ್ರಯಾಣಿಕರ ಎಂದು ಪಾಕ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ಇದಕ್ಕು ಮುನ್ನ ಅಹ್ಮದ್ ವಾಲ್ ನಗರದಲ್ಲಿ ಅಮೆರಿಕ ಸೇನಾಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮುಲ್ಲಾ ಮನ್ಸೂರ್ ಮೃತಪಟ್ಟಿರುವ ಸಾಧ್ಯತೆ ಇದೆ ಅಮೆರಿಕ ಅಧಿಕಾರಿಗಳು ತಿಳಿಸಿರುವುದಾಗಿ ಸಿಎನ್ಎನ್ ವರದಿ ಮಾಡಿತ್ತು.
ವಾಹನದಲ್ಲಿ ತೆರಳುತ್ತಿದ್ದ ಉಗ್ರ ಮನ್ಸೂರ್ ಹಾಗೂ ಆತನ ಸಹಚರ ಸಾವನ್ನಪ್ಪಿರುವ ಸಾಧ್ಯತೆ ಇದೆ, ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಮಾಡಲಾಗಿತ್ತು. ಆದರೆ ಈ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಪಾಕಿಸ್ತಾನದ ಉರ್ದು ಚಾನಲ್ ಸಮಾ ಟಿವಿ, ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗಳ ದೇಹವನ್ನು ನೌಷ್ಕಿ ಆಸ್ಪತ್ರೆದೆ ತರಲಾಗಿದ್ದು, ಅವರ ಬಳಿ ಗುರುತಿನ ಚೀಟಿ ಸಹ ಪತ್ತೆಯಾಗಿದೆ ಎಂದು ಹೇಳಿದೆ.
ಅಮೆರಿಕ ಮಾನವ ರಹಿತ ಯುದ್ಧ ವಿಮಾನಗಳ ಮೂಲಕ ವೈಮಾನಿಕ ದಾಳಿ ನಡೆಸಲಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ. ತಾಲಿಬಾನ್ ಉಗ್ರರ ಸಂಘಟನೆ ಮುಖಂಡ ಮನ್ಸೂರ್ ಅಪ್ಘಾನಿಸ್ತಾನ ಹಾಗೂ ತಾಲಿಬಾನ್ ಉಗ್ರ ಅಸಂಘಟನೆಯ ನಡುವೆ ನಡೆಯುತ್ತಿದ್ದ ಶಾಂತಿ ಮಾತುಕತೆಗೆ ಅಡ್ಡಿಯಾಗಿದ್ದ ಈ ಹಿನ್ನೆಲೆಯಲ್ಲಿ ಆತನ ಕ್ಯಾಂಪ್ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ.