ವಿದೇಶ

ಮುಲ್ಲಾ ಮನ್ಸೂರ್ ಹತ್ಯೆ ನಂತರ ತಾಲಿಬಾನ್ ಗೆ ಹೊಸ ಮುಖ್ಯಸ್ಥನ ನೇಮಕ

Srinivas Rao BV

ಕಾಬೂಲ್: ಅಮೆರಿಕ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ತಾಲಿಬಾನ್ ಉಗ್ರ ಸಂಘಟನೆ ಮುಖ್ಯಸ್ಥ ಮುಲ್ಲಾ ಮನ್ಸೂರ್ ಹತ್ಯೆಗೀಡಾದ ಹಿನ್ನೆಲೆಯಲ್ಲಿ ತಾಲಿಬಾನ್ ಉಗ್ರ ಸಂಘಟನೆ ನೂತನ ಮುಖ್ಯಸ್ಥನನ್ನು ಆಯ್ಕೆ ಮಾಡಿದೆ.
ಮುಖ್ಯಸ್ಥನ ನೇಮಕದ ಬಗ್ಗೆ ಆನ್ ಲೈನ್ ನಲ್ಲಿ ಮಾಹಿತಿ ನೀಡಿರುವ ತಾಲಿಬಾನ್ ಸಂಘಟನೆ, ಮುಲ್ಲಾ ಮನ್ಸೂರ್ ಹತ್ಯೆಗೀಡಾಗಿರುವುದನ್ನು ಒಪ್ಪಿಕೊಂಡಿದ್ದು, ಹೈಬತ್-ಉಲ್ಲಾ- ಅಖುಂಜಾದ ನನ್ನು ತಾಲಿಬಾನ್ ನ ಸಂಘಟನೆ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.
ಇನ್ನು ಹಕ್ಕಾನಿ ಭಯೋತ್ಪಾದಕ ಉಗ್ರ ಸಂಘಟನೆಯ ಮುಖಂಡ ಸಿರಾಜುದ್ದೀನ್ ಹಕ್ಕಾನಿಯನ್ನು ಉಪನಾಯಕನ್ನಾಗಿ ತಾಲಿಬಾನ್ ನೇಮಕ ಮಾಡಿದೆ. ಪಾಕಿಸ್ತಾನ- ಅಪ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಮೇ.22 ರಂದು ಅಮೆರಿಕ ತಾಲಿಬಾನ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿ ಉಗ್ರ ಸಂಘಟನೆಯ ಮುಖಂಡ ಮುಲ್ಲಾ ಮನ್ಸೂರ್ ನನ್ನು ಹತ್ಯೆ ಮಾಡಿತ್ತು. ಅಮೆರಿಕ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಉಗ್ರ ಮುಖಂಡ ಹತ್ಯೆಗೀಡಾಗಿರುವುದನ್ನು ಪಾಕಿಸ್ತಾನ ತಳ್ಳಿಹಾಕಿದ್ದು

SCROLL FOR NEXT