ವಿದೇಶ

ಕೋಳಿ ಕೂಗಿದ್ದಕ್ಕೆ ಯಜಮಾನನಿಗೆ ಜೈಲು ಶಿಕ್ಷೆ ವಿಧಿಸಿದ ಸೌದಿ!

Manjula VN

ಅಲ್-ಅಹ್ಸಾ: ಕೋಳಿಗಳು ಶಬ್ಧದಿಂದ ಗದ್ದಲುವನ್ನುಂಟು ಮಾಡುತ್ತಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಜೈಲು ಶಿಕ್ಷೆ ಹಾಗೂ ಛಡಿಯೇಟು ವಿಧಿಸಿರುವ ಅತೀ ವಿರಳಾತಿವಿರಳ ಪ್ರಕರಣವೊಂದು ಸೌದಿ ಅರೇಬಿಯಾದ ಅಲ್ ಅಹ್ಸಾದಲ್ಲಿ ನಡೆದಿದೆ.

ಕೋಳಿಗಳು ಪ್ರತಿನಿತ್ಯ ಗದ್ದಲವನ್ನುಂಟು ಮಾಡಿ ಕಿರಿಕಿರಿಯುಂಟು ಮಾಡುತ್ತಿದೆ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಹೇಳಿ ನಾಗರೀಕರೊಬ್ಬರು ಸೌದಿ ಅಲ್ ಹೊಫಾಫ್ ಮುನ್ಸಿಪಾಲಿಟಿಯಲ್ಲಿ ದೂರು ಸಲ್ಲಿಸಿದ್ದರು.

ಇದರಂತೆ ದೂರನ್ನು ಪರಿಶೀಲಿಸಿದ್ದ ಸೌದಿ ಮುನ್ಸಿಪಾಲಿಟಿ ಮೊದಲಿಗೆ ಕೋಳಿಗಳ ಯಜಮಾನನೊಂದಿಗೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಯತ್ನಿಸಿದೆ ಆದರೆ, ಈ ಪ್ರಯತ್ನ ವ್ಯರ್ಥವಾದ ಹಿನ್ನೆಲೆಯಲ್ಲಿ ಇದೀಗ ಕೋಳಿಗಳ ಮಾಲೀಕನಿಗೆ ಜೈಲು ಶಿಕ್ಷೆ ಹಾಗೂ ಛಡಿಯೇಟು ಶಿಕ್ಷೆ ವಿಧಿಸಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಈ ರೀತಿಯ ಪ್ರಕರಣಗಳಲ್ಲಿ ಶರಿಯಾ ಹಾಗೂ ರಾಜಾಡಳಿತದ ನಿಯಮಗಳನ್ನು ಪಾಲಿಸಲಾಗುತ್ತದೆ ಎಂದು ನ್ಯಾಯವಾದಿ ಮಿಶಾಲ್ ಅಲ್ ಅಕ್ಸರ್ರನ್ನು ಉಲ್ಲೇಖಿಸಿರುವ ವರದಿ ತಿಳಿಸಿದೆ. ಪ್ರಕರಣದಲ್ಲಿ ತಪ್ಪಿತಸ್ಥರಾದವರಿಗೆ ಜೈಲು, ಛಡಿಯೇಟು ಅಥವಾ ದಂಡ ಎದುರಿಸಬೇಕಾಗುತ್ತದೆ.

SCROLL FOR NEXT