ಗುವಾಂಗ್ಝೌ: ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಚೀನಾ ಉದ್ಯಮಿಗಳನ್ನು ಭೇಟಿ ಮಾಡಿದ್ದು ಮೇಕ್ ಇನ್ ಇಂಡಿಯಾದೊಂದಿಗೆ ಕೈ ಜೋಡಿಸುವಂತೆ ಆಹ್ವಾನಿಸಿದ್ದಾರೆ.
ಭಾರತದಲ್ಲಿ ಹೂಡಿಕೆ ಹಾಗೂ ಉತ್ಪಾದನೆ ಮಾಡಲು ಚೀನಾ ಉದ್ಯಮಿಗಳಿಗೆ ಭಾರತ ಅತ್ಯುತ್ತಮ ವಾತಾವರಣ ಒದಗಿಸಲಿದೆ ಎಂದು ಪ್ರಣಬ್ ಮುಖರ್ಜಿ ಭರವಸೆ ನೀಡಿದ್ದಾರೆ. ಭಾರತ- ಚೀನಾಗೆ ಆರ್ಥಿಕ ಹಾಗೂ ವಾಣಿಜ್ಯ ಸಹಕಾರದ ವಿಷಯದಲ್ಲಿ ಅದ್ಭುತವಾದ ಸಮಾರ್ಥ್ಯವಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನಮ್ಮಲ್ಲಿರುವ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಉಭಯ ರಾಷ್ಟ್ರಗಳ ಉದ್ಯಮ ಸಮುದಾಯದ ನಡುವೆ ಇರುವ ಮಾಹಿತಿಯ ಅಂತರವನ್ನು ಕಡಿಮೆ ಮಾಡಬೇಕು, ಭಾತತ ಚೀನಾ ಉದ್ಯಮಿಗಳಿಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಲು ಸಿದ್ಧವಿದೆ ಎಂದು ಪ್ರಣಬ್ ಮುಖರ್ಜಿ ಚೀನಾ ಉದ್ಯಮಿಗಳಿಗೆ ತಿಳಿಸಿದ್ದಾರೆ.
ಮೇ.24 ರಿಂದ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಬೀಜಿಂಗ್ ಗೂ ಭೇಟಿ ನೀಡಲಿದ್ದಾರೆ.