ವಿದೇಶ

ಫಿಜಿಯಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲು

Srinivasamurthy VN

ಸುವಾ: ಶುಕ್ರವಾರ ಬೆಳಗ್ಗೆ ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ದಾಖಲಾಗಿದೆ.

ದಕ್ಷಿಣ ಫಿಜಿ ಸಮೀಪವಿರುವ ಸಮುದ್ರದಾಳದಲ್ಲಿ ಇಂದು ಬೆಳಗ್ಗೆ 6.4ರಷ್ಟು ತೀವ್ರತೆಯ ಭಾರಿ ಭೂಕಂಪನ ಸಂಭವಿಸಿದ್ದು, ದಕ್ಷಿಣ ಫಿಜಿಯಿಂದ ಸುಮಾರು 19 ಕಿಮೀ ದೂರದಲ್ಲಿರುವ ನ್ಡೋಯ್  ದ್ವೀಪ ಸಮುದ್ರದ ಸುಮಾರು 572.1 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಭಾರಿ ಪ್ರಮಾಣದಲ್ಲಿ ಭೂಕಂಪನ ಸಂಭವಿಸಿರುವುದರಿಂದ ಸಂಭಾವ್ಯ ಸುನಾಮಿ ಕುರಿತು ತಜ್ಞರು  ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸಮುದ್ರದ ಭಾರಿ ಆಳದಲ್ಲಿ ಭೂಕಂಪನ ಸಂಭವಿಸಿರುವುದರಿಂದ ಸುನಾಮಿ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆಯಾದರೂ, ಮುನ್ನೆಚ್ಚರಿಕಾ ಕ್ರಮವಾಗಿ ಸಂಭಾವ್ಯ ಸುನಾಮಿ ಕುರಿತು  ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ಭೂಕಂಪದಿಂದಾಗಿ ಸಾವು-ನೋವುಗಳಾದ ಕುರಿತು ಈ ವರೆಗೂ ಮಾಹಿತಿಗಳ ಲಭ್ಯವಾಗಿಲ್ಲ.

SCROLL FOR NEXT