ವಿದೇಶ

ಸಣ್ಣ ಪ್ರಮಾಣದಲ್ಲಿ ಪತ್ನಿಯರನ್ನು ಥಳಿಸಿದರೆ ತಪ್ಪಿಲ್ಲ: ಪಾಕ್ ಇಸ್ಲಾಮಿಕ್ ಕೌನ್ಸಿಲ್

Srinivasamurthy VN

ಇಸ್ಲಾಮಾಬಾದ್: ಪಾಕಿಸ್ತಾನದ ಗಂಡಂದಿರು ತಮ್ಮ ಪತ್ನಿಯನ್ನು ಸಣ್ಣ ಪ್ರಮಾಣದಲ್ಲಿ ಥಳಿಸಿದರೆ ತಪ್ಪೇನು ಇಲ್ಲ ಎಂದು ಅಲ್ಲಿನ ಸ್ಥಳೀಯ ಇಸ್ಲಾಮಿಕ್  ಕೌನ್ಸಿಲ್ ಹೇಳಿದೆ.

ಪಾಕಿಸ್ತಾನ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಸಿಐಐ ಎಂದೇ ಖ್ಯಾತಿಗಳಿಸಿರುವ ಇಸ್ಲಾಮಿಕ್ ಕೌನ್ಸಿಲ್ ಮಹಿಳಾ ರಕ್ಷಣೆಗಾಗಿ ಹೊಸದೊಂದು ಕಾನೂನನ್ನು ಜಾರಿಗೆ ತಂದಿದ್ದು, ಅದರಲ್ಲಿ ಗಂಡನ ಅಪ್ಪಣೆಯ ವಿರುದ್ಧವಾಗಿ ನಡೆಯುವ ಮಹಿಳೆಯನ್ನು ಆತ ಅಲ್ಪ ಪ್ರಮಾಣದಲ್ಲಿ ಮಾತ್ರ ಥಳಿಸಬಹುದು. ಅದನ್ನು ಮೀರಿದರೆ ಆತ ಶಿಕ್ಷಾರ್ಹನಾಗುತ್ತಾನೆ ಎಂದು ಹೇಳಿದೆ.

ಇದೇ ವೇಳೆ ಗಂಡಂದಿರುವ ಪತ್ನಿಯರನ್ನು ಥಳಿಸಿವುದನ್ನು ಸಮರ್ಥಿಸಿಕೊಂಡಿರುವ ಇಸ್ಲಾಮಿಕ್ ಕೌನ್ಸಿಲ್, "ಪತ್ನಿಯರನ್ನು ಥಳಿಸುವುದನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಅದು ಸೀಮಿತವಾಗಿರಬೇಕು. ತನ್ನ ಹೆಂಡತಿ ತನ್ನ ಅಪ್ಪಣೆಯನ್ನು ಪಾಲಿಸದಿದ್ದಾಗ ಅತ ಸಣ್ಣ ಪ್ರಮಾಣದಲ್ಲಿ ಥಳಿಸಬಹುದೇ ಹೊರತು ದೊಡ್ಡ ಪ್ರಮಾಣದಲ್ಲಿ ಅಲ್ಲ. ಹಾಗೇನಾದರೂ ನಿಯಮಮೀರಿ ಆತ ಗಂಭೀರವಾಗಿ ಥಳಿಸಿದರೆ ಅತನನ್ನು ಶಿಕ್ಷೆಗೆ ಒಳಪಡಿಸಬಹುದು" ಎಂದು ಹೇಳಿದೆ.

ಇನ್ನು ಈ ನೂತನ ನಿಯಮದಲ್ಲಿ ಸಾಕಷ್ಟು ಅಂಶಗಳನ್ನು ಸೇರಿಸಲಾಗಿದ್ದು, ಗಂಡನ ಅಪೇಕ್ಷೆಗೆ ತಕ್ಕಂತೆ ಉಡುಗೆ ತೊಡದಿದ್ದರೆ, ಗಂಡ ಅಪೇಕ್ಷಿಸಿದಾಗ ಸೇರಲು ನಿರಾಕರಿಸಿದರೆ, ಮತ್ತು ಲೈಂಗಿಕ ಕ್ರಿಯೆ ಬಳಿಕ ಮತ್ತು ತಿಂಗಳ ಮುಟ್ಟಿನ ಸಂದರ್ಭದಲ್ಲಿ ಸ್ನಾನ ಮಾಡದೇ ಇದ್ದರೇ ಆಗ ಆಕೆಯನ್ನು ಅಲ್ಪ ಪ್ರಮಾಣದಲ್ಲಿ ಗಂಡ ಥಳಿಸಬಹುದು ಎಂದು ಇಸ್ಲಾಮಿಕ್ ಕೌನ್ಸಿಲ್ ಹೇಳಿದೆ. ಇಸ್ಲಾಮಿಕ್  ಕೌನ್ಸಿಲ್ ಈ ನೂತನ ಕಾಯ್ದೆ ಇದೀಗ ಪಾಕಿಸ್ತಾನದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಕಾನೂನು ಇಲ್ಲದೆಯೇ ಪಾಕ್ ಗಂಡಂದಿರು ಪತ್ನಿಯರನ್ನು ನೋಡಿಕೊಳ್ಳುವ ಪರಿ ಹೇಗಿದೆ ಎಂದು ತಿಳಿದಿದೆ. ಇನ್ನು  ಕಾನೂನಿನಲ್ಲಿಯೇ ಪತ್ನಿಯನ್ನು ಥಳಿಸಲು ಅಧಿಕಾರ ನೀಡಿದರೆ ಅವರ ಗತಿ ಏನು? ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.

ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಸಿಐಐ, ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿ ನಿಜವಾದರೂ ಅದರಲ್ಲಿ ಇನ್ನೂ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ಕಾನೂನು ತಜ್ಞರು ಒಪ್ಪಿಗೆ  ಪಡೆದ ಬಳಿಕ ಅದನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದೆ.

SCROLL FOR NEXT