ಕೈರೋ: ಕಳೆದ ಎರಡು ದಿನಗಳಿಂದ ಈಜಿಪ್ಟ್ ಸೇನಾ ಪಡೆಗಳು ಕೈಗೊಂಡ ಕಾರ್ಯಾಚರಣೆಯಲ್ಲಿ 36 ಉಗ್ರರನ್ನು ಹತ್ಯೆ ಮಾಡಲಾಗಿದ್ದು ೩೮ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಈಜಿಪ್ಟ್ ನ ಉತ್ತರ ಸಿನಾಯ್ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಪೊಲೀಸರ ನೆರವು ಪಡೆದು ನಡೆಸಲಾದ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರ 25 ಮನೆಗಳು ಹಾಗೂ ೫೭ ಗುಡಿಸಲುಗಳನ್ನು ನಾಶಗೊಳಿಸಲಾಗಿದೆ, ಇದರೊಂದಿಗೆ ಅಪಾರಪ್ರಮಾಣದ ಸ್ಫೋಟಕಗಳನ್ನೂ ಸಹ ನಾಶಗೊಳಿಸಲಾಗಿದೆ ಎಂದು ಈಜಿಪ್ಟ್ ನ ಸೇನಾ ವಕ್ತಾರರು ತಿಳಿಸಿದ್ದಾರೆ.
ಕಳೆದ ವಾರ ನಡೆದ ಕಾರ್ಯಾಚರಣೆಯಲ್ಲಿಯೂ 85 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈಜಿಪ್ಟ್ ನ ಉತ್ತರ ಸಿನಾಯ್ ಪ್ರದೇಶದಲ್ಲಿ ಭಯೋತ್ಪಾದಕ ಸಮಸ್ಯೆ ಹೆಚ್ಚುತ್ತಿದ್ದು ಸೇನಾ ಪಡೆಗಳು ಉಗ್ರ ನಿರ್ಮೂಲನೆ ಕಾರ್ಯಾಚರಣೆಯಲ್ಲಿ ತೊಡಗಿವೆ.