ಅಮೆರಿಕಾ ಗಗನಯಾತ್ರಿ ಶೇನ್ ಕಿಂಬ್ರೊ
ಮಿಯಾಮಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಬಾಹ್ಯಾಕಾಶದಿಂದ ಅಮೆರಿಕಾದ ಒಬ್ಬನೇ ಒಬ್ಬ ಗಗನಯಾತ್ರಿ ಮತ ಚಲಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಅಮೆರಿಕಾದ ಗಗನಯಾತ್ರಿ ಶೇನ್ ಕಿಂಬ್ರೊ ಮತ ಹಾಕಿದ್ದಾರೆ. ರಷ್ಯಾದ ಸೊಯೊಜ್ ರಾಕೆಟ್ ನಲ್ಲಿ ಅಕ್ಟೋಬರ್ 19ರಂದು ನಾಲ್ಕು ತಿಂಗಳ ಬಾಹ್ಯಾಕಾಶ ಪ್ರಯಾಣವನ್ನು ಆರಂಭಿಸಿರುವ ಕಿಂಬ್ರೊ ಜೊತೆಗೆ ಮತ್ತಿಬ್ಬರು ರಷ್ಯಾದ ಗಗನಯಾತ್ರಿಗಳಿದ್ದಾರೆ.
ಅಮೆರಿಕಾದ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದುಕೊಂಡು 1997ರಿಂದ ಮತ ಚಲಾಯಿಸುತ್ತಾರೆ. ಅದಕ್ಕೆ ಟೆಕ್ಸಾಸ್ ಕಾನೂನಿನಲ್ಲಿ ಅವಕಾಶವಿದೆ. ನಾಸಾದ ಕಾರ್ಯಾಚರಣೆಯ ನಿಯಂತ್ರಣ ಮತ್ತು ಜಾನ್ಸನ್ ಬಾಹ್ಯಾಕಾಶ ಕೇಂದ್ರವಿರುವ ಹ್ಯೂಸ್ಟನ್ ಪ್ರದೇಶದಲ್ಲಿ ಬಹಳಷ್ಟು ಗಗನಯಾತ್ರಿಗಳು ನೆಲೆಸಿದ್ದಾರೆ.
ಬಾಹ್ಯಾಕಾಶದಿಂದ ಮೊದಲ ಬಾರಿಗೆ ಮತ ಚಲಾಯಿಸಿದ ಮೊದಲ ಅಮೆರಿಕನ್ ಡೇವಿಡ್ ವೋಲ್ಫ್. ಅವರು ರಷ್ಯಾದ ಅಂತರಿಕ್ಷ ಕೇಂದ್ರ ಮಿರ್ ನಿಂದ ತಮ್ಮ ಮತ ಚಲಾಯಿಸಿದ್ದರು.ಹಾಗೆಯೇ ಅಂತರಿಕ್ಷದಿಂದ ಮತ ಹಾಕಿದ ಮೊದಲ ಅಮೆರಿಕಾ ಗಗನಯಾತ್ರಿ ಲೆರೊಯ್ ಚಿಯಾವ್ 2004ರಲ್ಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics