ಮತದಾನ ಮಾಡುತ್ತಿರುವ ಸಾರ್ವಜನಿಕರು
ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ ಮತದಾನ ಆರಂಭವಾಗಿದ್ದು, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೆಮಾಕ್ರೆಟ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹಾಗೂ ಅವರ ಪತಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇಂದು ಸಂಜೆ 6 ಗಂಟೆಯಿಂದ ಅಮೆರಿಕದಾದ್ಯಂತ ಮತದಾನ ಆರಂಭಗೊಂಡಿದ್ದು, ನ್ಯೂಯಾರ್ಕ್ ಹಿಲರಿ ಕ್ಲಿಂಟನ್ ಹಾಗೂ ಬಿಲ್ ಕ್ಲಿಂಟನ್ ಅವರು ತಮ್ಮ ಮತ ಚಲಾಯಿಸಿದರೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ರಿಚ್ಮಂಡ್ ನಲ್ಲಿ ಮತ ಚಲಾಯಿಸಿದ್ದಾರೆ.
ಅಮೆರಿಕದ 9 ರಾಜ್ಯಗಳಲ್ಲಿ ಒಟ್ಟು 538 ಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡಲಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 270 ಪ್ರತಿನಿಧಿಗಳ ಬೆಂಬಲ ಬೇಕು. ಅಮೆರಿಕದ ಸುಮಾರು 20 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಈಗಾಗಲೇ 4 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಒಂದು ವೇಳೆ ನಿರೀಕ್ಷೆಯಂತೆ ಹಿಲರಿ ಕ್ಲಿಂಟನ್ ನೂತನ ಅಧ್ಯಕ್ಷೆಯಾಗಿ ಹೊರಹೊಮ್ಮಿದರೆ, ಅವರು ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಹೊಂದಿರುವ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ, ಒಂದು ವೇಳೆ ಎಲ್ಲರ ನಿರೀಕ್ಷೆಗಳನ್ನು ಮೀರಿ ಶ್ರೀಮಂತ ಕುಳ ಟ್ರಂಪ್ ಆಯ್ಕೆಯಾಗಿದ್ದೇ ಆದಲ್ಲಿ ಅದು ರಾಜಕೀಯತೇರ ವ್ಯಕ್ತಿಯೊಬ್ಬನ ಹೊಸ ಅವತಾರಕ್ಕೆ ಸಾಕ್ಷಿಯಾಗಲಿದೆ.
ಈ ಬಾರಿ ಯಾರು ಶ್ವೇತಭವನ ಪ್ರವೇಶಿಸಲಿದ್ದಾರೆ ಎಂಬ ಕುತೂಹಲಕ್ಕೆ(ಅಮೆರಿಕ; ಮಾಲ್ ನಲ್ಲೂ ವೋಟ್ ಕಿಯೋಸ್ಕ್; ಸಂಜೆಯೇ ಫಲಿತಾಂಶ!) ಬುಧವಾರ ತೆರೆ ಬೀಳಲಿದೆ.