ವಿದೇಶ

ಅಣ್ವಸ್ತ್ರ ಸಾಮರ್ಥ್ಯ ವಿಸ್ತರಿಸಿದ ಪಾಕ್; 140 ಅಣ್ವಸ್ತ್ರಗಳು, ದಾಳಿಗೆ ಸಜ್ಜಾದ ಎಫ್-16 ಯುದ್ಧ ವಿಮಾನ

Srinivasamurthy VN

ವಾಷಿಂಗ್ಟನ್: ಸದಾಕಾಲ ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದ್ದು, 110ರಿಂದ 120ರಷ್ಟಿದ್ದ ಪಾಕಿಸ್ತಾನ ಅಣ್ವಸ್ತ್ರಗಳ ಸಂಖ್ಯೆ  ಇದೀಗ 130-140ಕ್ಕೇರಿದೆ ಎಂದು ಹೇಳಲಾಗುತ್ತಿದೆ.

ಕರಾಚಿಯಲ್ಲಿರುವ ಪಾಕಿಸ್ತಾನ ವಾಯುನೆಲೆಯಲ್ಲಿ ಈ ಅಣ್ವಸ್ತ್ರಗಳನ್ನು ಸಂಗ್ರಹಿಸಡಲಾಗಿದ್ದು, ಈ ಅಣ್ವಸ್ತ್ರಗಳನ್ನು ಪಾಕಿಸ್ತಾನ ವಾಯುಸೇನೆಯ ಉನ್ನತ ಮಟ್ಟದ ತುಕಡಿಗಳು ಕಾವಲು ಕಾಯುತ್ತಿವೆ ಎಂದು ಹೆನ್ಸ್ ಕ್ರಿಸ್ಟಿನ್ಸನ್ ಹಾಗೂ  ರಾಬರ್ಟ್ ಎಸ್ ನಾರಿಸ್ ಅವರನ್ನು ಒಳಗೊಂಡ ಅಮೆರಿಕದ ಭದ್ರತಾ ತಜ್ಞರ ಸಮಿತಿ ಬಹಿರಂಗಪಡಿಸಿದೆ. ಅಲ್ಲದೆ ಇದೇ ವಾಯುನೆಲೆಯಲ್ಲಿ ಎಫ್-16ಯುದ್ಧ ವಿಮಾನಗಳನ್ನು ಕೂಡ ನಿಯೋಜನೆ ಮಾಡಲಾಗಿದ್ದು, ಅಣ್ವಸ್ತ್ರಗಳನ್ನು  ಪ್ರಯೊಗಿಸಲೆಂದೇ ಈ ಅತ್ಯುನ್ನತ ಯುದ್ಧ ವಿಮಾನವನ್ನು ಅಲ್ಲಿರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಚೀನಾದ ನೆರವಿನೊಂದಿಗೆ ಯುದ್ಧ ವಿಮಾನಗಳಿಗೆ ಅಣ್ವಸ್ತ್ರ ಹೊತ್ತೊಯ್ಯುವ ಮತ್ತು ದಾಳಿ ನಡೆಸುವ ತಂತ್ರಜ್ಞಾನ  ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಕರಾಚಿ ವಾಯುನೆಲೆಯಲ್ಲಿ ಭಾರತದ ಅರ್ಧಭಾಗದಷ್ಟು ಭೂಮಿಯನ್ನು ತುಲುಪಬಲ್ಲ ಮೊಬೈಲ್ ಮಿಸೈಲ್ ಲಾಂಚರ್ ಗಳನ್ನು ನಿಯೋಜಿಸಲಾಗಿದ್ದು, ಇವುಗಳ ಮೂಲಕ ಅಣ್ವಸ್ತ್ರ ಪ್ರಯೋಗಿಸಲು ಪಾಕಿಸ್ತಾನ ನಿಯೋಜಿಸಿದೆ  ಎಂದು ತಿಳಿದುಬಂದಿದೆ. ಪಾಕಿಸ್ತಾನದ ಈ ಅಣ್ವಸ್ತ್ರ ಯೋಜನೆಗೆ ಚೀನಾ ದೇಶ ಆರ್ಥಿಕ ನೆರವು ನೀಡುತ್ತಿರುವ ಕುರಿತು ಸಮಿತಿ ಶಂಕೆ ವ್ಯಕ್ತಪಡಿಸಿದ್ದು, ಚೀನಾ ಕೂಡ ತನ್ನ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಮಾರಾಟ  ಮಾಡಿದೆ ಎಂದು ಹೇಳಿದೆ.

ಕರಾಚಿಯ ಮಸೂರ್ ನಲ್ಲಿ ಸೀಕ್ರೇಟ್ ಅಂಡರ್ ಗ್ರೌಂಡ್ ಶಸ್ತ್ರಾಸ್ತ್ರ ಗೋದಾಮು
ಇನ್ನು ಅಮೆರಿಕದ ಭಧ್ರತಾ ಸಮಿತಿ ಬಹಿರಂಗ ಪಡಿಸಿರುವ ಸ್ಯಾಟಲೈಟ್ ಚಿತ್ರಗಳಲ್ಲಿ ಅಣ್ವಸ್ತ್ರಗಳನ್ನು ಶೇಖರಿಸಿಡಲಾಗಿರುವ ಕರಾಚಿಯ ಮಸ್ಸೂರ್ ನಲ್ಲಿರುವ ವಾಯುನೆಲೆಯ ಕೆಳಗೆ ರಹಸ್ಯ ಅಂಡರ್ ಗ್ರೌಂಡ್ ಗೋದಾಮುಗಳನ್ನು  ನಿರ್ಮಿಸಲಾಗಿದ್ದು, ಇಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಪಾಕಿಸ್ತಾನ ಶೇಖರಿಸಿಟ್ಟಿದೆ ಎಂದು ಸಮಿತಿಯ ವಿಜ್ಞಾನಿಗಳು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಇನ್ನು ಈ ವಾಯುನೆಲೆ ಭದ್ರತೆಗಾಗಿ ನಿಯೋಜಿಸಿರುವ ಯುದ್ಧ  ವಿಮಾನಗಳಿಗೆ ಕ್ರೂಸ್ ಮತ್ತು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸುವ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ವಿಜ್ಞಾನಿಗಳ ತಂಡ ಆಭಿಪ್ರಾಯಪಟ್ಟಿದೆ.

ಅಣ್ವಸ್ತ್ರ ಯೋಜನೆಗೆ ಚೀನಾದ ಆರ್ಥಿಕ ಮತ್ತು ತಂತ್ರಜ್ಞಾನ ನೆರವು
ಪಾಕಿಸ್ತಾನದ ಈ ಬೃಹತ್ ಅಣ್ವಸ್ತ್ರ ಯೋಜನೆದೆ ಚೀನಾ ಆರ್ಥಿಕ ಮತ್ತು ತಂತ್ರಜ್ಞಾನ ನೆರವು ನೀಡಿದ್ದು, ಭಾರತದ ವಿರೋಧದ ನಡುವೆಯೇ ಗುಪ್ತವಾಗಿ ಪಾಕಿಸ್ತಾನಕ್ಕೆ ರಕ್ಷಣಾ ತಂತ್ರಜ್ಞಾನವನ್ನು ನೀಡಿದೆ ಎಂದು ವಿಜ್ಞಾನಿಗಳು  ಆರೋಪಿಸಿದ್ದಾರೆ.

SCROLL FOR NEXT