ಮಸೂಲ್: ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಮಸೂಲ್ ನಗರದ ಕೆಲವು ಭಾಗಗಳನ್ನು ವಶಕ್ಕೆ ಪಡೆಯುವಲ್ಲಿ ಇರಾಕ್ ನ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಇಸೀಸ್ ಉಗ್ರ ಸಂಘಟನೆಯ ವಶದಲ್ಲಿದ್ದ ಎರಡು ಗ್ರಾಮಗಳನ್ನು ಇರಾಕ್ ನ ಸೇನೆ ವಶಪಡಿಸಿಕೊಂಡಿದೆ. ಇರಾಕ್ ಸೇನೆಯ 9ನೇ ಸಶಸ್ತ್ರ ವಿಭಾಗದ ಪಡೆ ದಕ್ಷಿಣ ಮಸೂಲ್ ನಲ್ಲಿರುವ ಖೇದ್ರ್-ಅಲ್-ಯಾಸ್ ಎಂಬ ಪಟ್ಟಣದ ಎರಡು ಗ್ರಾಮಗಳನ್ನು ಇಸೀಸ್ ಉಗ್ರರರಿಂದ ಮುಕ್ತಗೊಳಿಸಿದೆ.
ಈ ಪೈಕಿ ಇಸೀಸ್ ಉಗ್ರ ಸಂಘಟನೆ ಧ್ವಂಸಗೊಳಿಸಿದ್ದ ಪುರಾತನ ನಿಮ್ರುದ್ ಪಟ್ಟಣವನ್ನೂ ವಶಪಡಿಸಿಕೊಳ್ಳಲಾಗಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಪ್ರದೇಶ ಈಗ ಇರಾಕ್ ಸೇನೆಯ ವಶದಲ್ಲಿದೆ. ಇಸೀಸ್ ಉಗ್ರ ಸಂಘಟನೆ ಮೇಲೆ ಇರಾಕ್ ಸೇನೆಯ ಕಾರ್ಯಾಚರಣೆ ಮುಂದುವರೆದಿದ್ದು, ವಶಪಡಿಸಿಕೊಳ್ಳಲಾಗಿರುವ ಪ್ರದೇಶದಲ್ಲಿ ಇಸೀಸ್ ಉಗ್ರ ಸಂಘಟನೆ ಇರಿಸಿದ್ದ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಇಸೀಸ್ ಉಗ್ರರ ಕೈಗೆ ಸಿಲುಕಿರುವ ಇರಾಕ್ ನ ಎರಡನೇ ಅತಿ ದೊಡ್ಡ ನಗರವಾಗಿರುವ ಮಸೂಲ್ ನ್ನು ವಾಪಸ್ ಪಡೆಯಲು ಅ.17 ರಂದು ಇರಾಕ್ ಪ್ರಧಾನಿ ಇಸೀಸ್ ಉಗ್ರರ ವಿರುದ್ಧ ಸಮರ ಸಾರಿದ್ದರು.