ಇಸ್ಲಾಮಾಬಾದ್: ಪಾಕಿಸ್ತಾನ ಸೀಮಿತ ದಾಳಿ ನಡೆಸಿದರೆ ಭಾರತವು ಅನೇಕ ಪೀಳಿಗೆಯವರೆಗೆ ಅದನ್ನು ಮರೆಯುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಸಮಾರಂಭವೊಂದರಲ್ಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಉಭಯ ದೇಶಗಳು ಯೋಧರು ನಡುವೆ ದಿನಂಪ್ರತಿ ಗುಂಡಿನ ಚಕಮಕಿ ನಡೆಯುತ್ತಲೇ ಇದ್ದು ಈ ನಡುವೆ ಪಾಕಿಸ್ತಾನ ಮಿಲಿಟರಿ ಪಡೆ ಭಾರತದ ವಿರುದ್ಧ ಮಾತಿನ ದಾಳಿ ನಡೆಸಿವೆ. ಸರ್ಜಿಕಲ್ ದಾಳಿ ಅಂದರೆ ಹೇಗಿರುತ್ತದೆ ಎಂಬುದನ್ನು ಭಾರತವು ಮುಂದಿನ ಪೀಳಿಗೆಯ ಪಠ್ಯದಲ್ಲಿ ಅಳವಡಿಸುತ್ತದೆ ಎಂದು ಷರೀಫ್ ಹೇಳಿದ್ದಾರೆ.
ಮತ್ತೊಂದು ಸಮಾರಂಭದಲ್ಲಿ ಮಾತನಾಡಿದ ಪಾಕಿಸ್ತಾನ ವಾಯುಪಡೆ ಮುಖ್ಯಸ್ಥ ಸೊಹೇಲ್ ಅಮಾನ್ ಭಾರತದ ಬೆದರಿಕೆಗಳ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುವುದಿಲ್ಲ. ಆ ದೇಶ ಆಕ್ರಮಣಕಾರಿ ವರ್ತನೆ ತೋರಿದರೆ ತಿರುಗೇಟು ನೀಡುವ ಸಾಮರ್ಥ್ಯ ನಮಗಿದೆ ಎಂದರು.