ವಿದೇಶ

ನೇಪಾಳದಲ್ಲಿ ಪ್ರಬಲ ಭೂಕಂಪ: 5.5ರಷ್ಟು ತೀವ್ರತೆ ದಾಖಲು

Manjula VN

ಕಠ್ಮಂಡು: ನೆರೆ ರಾಷ್ಟ್ರ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ.

ಎವರೆಸ್ಟ್ ಪ್ರಾಂತ್ಯದ ಸೋಲಿಖುಂಬು ಜಿಲ್ಲೆಯಲ್ಲಿ ಇಂದು ಬೆಳಗಿನ ಜಾವ 5.05ರ ಸುಮಾರಿಗೆ ಭೂಕಂಪ ಸಂಭವಿದ್ದು, 10 ಕಿ.ಮೀ ಆಳಕ್ಕೆ ಭೂಮಿ ಕುಸಿದಿದೆ ಎಂದು ಭೂ ವಿಜ್ಞಾನಗಳ ಸಚಿವಾಲಯದ ಘಟಕವಾಗಿರುವ ಸೈಸ್ಮಾಲಜಿ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

2015ರ ಬಳಿಕ ನೇಪಾಳ ರಾಷ್ಟ್ರದಲ್ಲಿ ಶೇ.4ಕ್ಕಿಂತ ಅಧಿಕ ತೀವ್ರತೆಯ ದಾಖಲಾದ 475ನೇ ಭೂಕಂಪವಾಗಿದೆ. ಅಂದು ಸಂಭವಿಸಿದ್ದ ಭೀಕರ ಭೂಕಂಪದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು.

ಭೂಕಂಪದಿದಂದಾಗಿ ಯಾವುದೇ ನೋವು-ನೋವುಗಳ ಸಂಭವಿಸಿರುವುದಾಗಿ ವರದಿಗಳಾಗಿಲ್ಲ. ಕಠ್ಮಂಡು ಮತ್ತು ಕೇಂದ್ರ ನೇಪಾಳ ಮತ್ತು ಪೂರ್ವ ನೇಪಾಳದ ಇತರ ಭಾಗಗಳಲ್ಲೂ ಭೂಕಂಪನದ ಅನುಭವವಾಗಿದೆ.

SCROLL FOR NEXT