ಸಂಗ್ರಹ ಚಿತ್ರ 
ವಿದೇಶ

ಬ್ರೆಜಿಲ್ ಫುಟ್ ಬಾಲ್ ಕ್ಲಬ್ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನ ಪತನ; ಬಹುತೇಕರ ಸಾವಿನ ಶಂಕೆ!

ಬ್ರೆಜಿಲ್ ಫುಟ್ ಬಾಲ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವೊಂದು ಕೊಲಂಬಿಯಾ ಬಳಿ ಪತನವಾಗಿದ್ದು, ವಿಮಾನದಲ್ಲಿದ್ದ ಅಷ್ಟೂ ಮಂದಿ ಪ್ರಯಾಣಿಕರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಮೆಡೆಲ್ಲಿನ್: ಬ್ರೆಜಿಲ್ ಫುಟ್ ಬಾಲ್ ಕ್ಲಬ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವೊಂದು ಕೊಲಂಬಿಯಾ ಬಳಿ ಪತನವಾಗಿದ್ದು, ವಿಮಾನದಲ್ಲಿದ್ದ ಅಷ್ಟೂ ಮಂದಿ ಪ್ರಯಾಣಿಕರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಬ್ರೆಜಿಲ್ ನಿಂದ ಕೊಲಂಬಿಯಾಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬ್ರೆಜಿಲ್ ಫುಟ್ ಬಾಲ್ ಆಟಗಾರರು ಹಾಗೂ ವಿಮಾನದ ಸಿಬ್ಬಂದಿಗಳು ಸೇರಿದಂತೆ ಒಟ್ಟು 72 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.  ಕೊಲಂಬಿಯಾದ ಪರ್ವತ ಶ್ರೇಣಿ ಬಳಿ ವಿಮಾನ ಪತನವಾಗಿದ್ದು, ವಿಮಾನದಲ್ಲಿ ಎಲ್ಲ 72 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಕೊಲಂಬಿಯಾದ ಮೆಡೆಲ್ಲಿನ್ ಬಳಿ ಇರುವ ಪರ್ವತ ಶ್ರೇಣಿಗಳಲ್ಲಿ  ವಿಮಾನ ಪತನವಾದ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮೆಡೆಲ್ಲಿನ್ ಮೇಯರ್ ಫೆಡರಿಕೋ ಗಿಟೈರೆಜ್ ಅವರು, ಮಧ್ಯರಾತ್ರಿ ಚಾರ್ಟೆಡ್ ವಿಮಾನ ಪರ್ವತ ಶ್ರೇಣಿಯಲ್ಲಿ ಪತನವಾಗಿರುವ ಕುರಿತು ಮಾಹಿತಿ ಬಂದಿದೆ. ಘಟನಾ ಸ್ಥಳಕ್ಕೆ  ರಕ್ಷಣಾ ಸಿಬ್ಬಂದಿಗಳನ್ನು ರವಾನೆ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ. ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದ್ದಾರೆ.

ಇಂಧನ ಕೊರತೆಯಿಂದಾಗಿ ವಿಮಾನ ಅಪಘಾತ

ಇನ್ನು ಪ್ರಸ್ತುತ ಅಪಘಾತಕ್ಕೀಡಾಗಿರುವ ವಿಮಾನ ಬ್ರೆಜಿಲ್ ಬೊಲಿವಿಯಾದಿಂದ ಕೊಲಂಬಿಯಾದತ್ತ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಇಂಧನ ಖಾಲಿಯಾದ್ದರಿಂದ ವಿಮಾನ ಅಪಘಾತಕ್ಕೀಡಾಗಿರುವ ಸಾಧ್ಯತೆಗಳಿವೆ ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೈನಲ್ ಮ್ಯಾಚ್ ಆಡಲು ತೆರಳುತ್ತಿದ್ದ ಫುಟ್ ಬಾಲ್ ಆಟಗಾರರು


ಅಪಘಾತಕ್ಕೀಡಾದ ವಿಮಾನದಲ್ಲಿ ಫುಟ್ ಬಾಲ್ ಆಟಗಾರರು ಸ್ಥಳೀಯ ಕೋಪಾಸುಡಾಮೆರಿಕ ಪಂದ್ಯಾವಳಿಯ ಫೈನಲ್ ಪಂದ್ಯವನ್ನಾಡಲು ಕೊಲಂಬಿಯಾಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನೇಪಾಳದಲ್ಲಿ ನಿಷೇಧದ ಬಗ್ಗೆ ಏನಾಯಿತು ನೋಡಿಲ್ವ?': ಅಶ್ಲೀಲ ಚಿತ್ರ ನಿಷೇಧಿಸುವಂತೆ ಕೋರಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್

ತೆಲಂಗಾಣ ರಸ್ತೆ ಅಪಘಾತ ಪ್ರಕರಣ: ಸಾವಿನ ಸಂಖ್ಯೆ 24ಕ್ಕೆ ಏರಿಕೆ; ಪ್ರಧಾನಿ ಮೋದಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ICC ಮಹಿಳಾ ಏಕದಿನ ವಿಶ್ವಕಪ್ 2025: ಇತಿಹಾಸ ಬರೆದ ದೀಪ್ತಿ ಶರ್ಮಾ, ಹಲವು ದಾಖಲೆಗಳು, ಪುರುಷರೂ ಮಾಡದ ಸಾಧನೆ!

ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿ

ಮಹಿಳಾ ವಿಶ್ವಕಪ್ ಫೈನಲ್: ದ.ಆಫ್ರಿಕಾದಿಂದ ಗೆಲುವು ಕಸಿದ ಅದ್ಭುತ ಕ್ಯಾಚ್...! Video

SCROLL FOR NEXT