ಹವಾನ: ಕೆಲವು ದಿನಗಳ ಹಿಂದೆ ನಿಧನರಾದ ಕ್ಯೂಬಾದ ಮಾಜಿ ಅಧ್ಯಕ್ಷ, ಪ್ರಧಾನಿ ಫಿಡೆಲ್ ಕ್ಯಾಸ್ಟ್ರೋ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಭಾರತೀಯ ನಿಯೋಗ ಕ್ಯೂಬಾಗೆ ತೆರಳಿದೆ.
ಎಡಪಕ್ಷಗಳೂ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 8 ಮುಖಂಡರು ರಾಜನಾಥ್ ಸಿಂಗ್ ನೇತೃತ್ವದ ನಿಯೋಗದಲ್ಲಿ ಕ್ಯೂಬಾಗೆ ತೆರಳಿದ್ದಾರೆ. ಲೋಕಸಭೆಯ ಉಪಸಭಾಪತಿ ಎಂ ತಂಬಿದುರೈ, ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಕಾರ್ಯದರ್ಶಿ ಡಿ ರಾಜ, ಬಿಜೆಡಿ ಸಂಸದ ಜಿನಾ ಹಿಕಾಕ, ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಖಾನ್ ರಾಜನಾಥ್ ಸಿಂಗ್ ಅವರೊಂದಿಗೆ ತೆರಳಿದ್ದಾರೆ.
ಕ್ಯೂಬಾದ ರಾಜಧಾನಿ ಹವಾನದಲ್ಲಿ ಅಂತ್ಯಕ್ರಿಯೆ ನಡೆದ ಬಳಿಕ ಕ್ಯಾಸ್ಟ್ರೋ ಅವರ ಚಿತಾಭಸ್ಮ ನಾಲ್ಕು ದಿನಗಳ ಕಾಲ ದ್ವೀಪರಾಷ್ಟ್ರದಾದ್ಯಂತ ಸಂಚರಿಸಲಿದೆ ಎಂದು ತಿಳಿದುಬಂದಿದೆ. 90 ವರ್ಷದ ಕ್ಯಾಸ್ಟ್ರೋ ನ.25 ರಂದು ನಿಧನರಾಗಿದ್ದರು.