ಪ್ಯಾರಿಸ್: ಬೆತ್ತಲೆಯಾಗುವ ಮೂಲಕವೇ ಸದಾ ಸುದ್ದಿಯಾಗುತ್ತಿದ್ದ ಅಮೆರಿಕಾದ ಟೆಲಿವಿಶನ್ ತಾರೆ ಕಿಮ್ ಕರ್ದಾಶಿಯನ್ ಈ ಬಾರಿ ಬೆರೆ ಕಾರಣಕ್ಕೆ ಸುದ್ದಿಯಾಗಿದ್ದು, ಗನ್ ತೋರಿಸಿ ಅರೆಬೆತ್ತಲೆ ಬೆಡಗಿಯಿಂದ ಮಿಲಿಯನ್ ಗಟ್ಟಲೆ ದರೋಡೆ ಮಾಡಲಾಗಿದೆ.
ಪ್ಯಾರಿಸ್ ನಲ್ಲಿ ನಡೆಯಲಿದ್ದ ಷೋ ಒಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಕಿಮ್ ಕರ್ದಾಶಿಯನ್ ತಂಗಿದ್ದ ಖಾಸಗಿ ನಿವಾಸಕ್ಕೆ ನುಗ್ಗಿದ ಮುಸುಕುಧಾರಿಗಳಿಬ್ಬರು ಗನ್ ತೋರಿಸಿ 10 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಖಾಸಗಿ ನಿವಾಸದಲ್ಲಿ ಕಿಮ್ ಕರ್ದಾಶಿಯನ್ ಒಬ್ಬರೇ ಇದ್ದ ವೇಳೆ ಇವರುಗಳು ನುಗ್ಗಿದ್ದು, ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಿಮ್ ಕರ್ದಾಶಿಯನ್ ಗೆ ಅಪರಿಚಿತರು ಏಕಾಏಕಿ ಮನೆಗೆಯೊಳಗೆ ನುಗ್ಗುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದಾರೆ. ದುಷ್ಕರ್ಮಿಗಳು ಗನ್ ತೋರಿಸುತ್ತಿದ್ದಂತೆಯೇ ತೀವ್ರ ಭೀತಿಗೊಂಡ ಆಕೆ, ತಮ್ಮ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ. ಘಟನೆಯಲ್ಲಿ ಕಿಮ್ ಕರ್ದಾಶಿಯನ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲವಾದರೂ ಘಟನೆಯಿಂದ ಶಾಕ್ ಗೆ ಒಳಗಾಗಿದ್ದಾರೆ. ಅಲ್ಲದೇ ತಾವು ತೆರಳಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆಂದು ಅವರ ವಕ್ತಾರರು ತಿಳಿಸಿದ್ದಾರೆ.
ವಾರದ ಹಿಂದಷ್ಟೇ ಅಭಿಮಾನಿಯೆಂದು ಹೇಳಿಕೊಂಡವನೊಬ್ಬ ಸಾರ್ವಜನಿಕ ಸ್ಥಳದಲ್ಲೇ ಕಿಮ್ ಕರ್ದಾಶಿಯನ್ ಅವರನ್ನು ಚುಂಬಿಸಲು ಯತ್ನಿಸಿದ್ದು, ಅದಾದ ಬಳಿಕ ಈ ಘಟನೆ ನಡೆದಿರುವುದು ಕರ್ದಾಶಿಯನ್ ರನ್ನು ದಿಗ್ಬ್ರಮೆಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ. ನ್ಯೂಯಾರ್ಕ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿಮ್ ಕರ್ದಾಶಿಯನ್ ಪತಿ, ಅದನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರೆಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos