ವಿದೇಶ

ಸೈಬಿರಿಯಾದಲ್ಲಿ ರಷ್ಯಾ ಹೆಲಿಕಾಪ್ಟರ್ ಪತನ; ಕನಿಷ್ಟ 19 ಸಾವು

Srinivasamurthy VN

ಮಾಸ್ಕೋ: ರಷ್ಯಾ ಸೇನೆಗೆ ಸೇರಿದ ಎಂಐ-8 ಹೆಲಿಕಾಪ್ಟರ್ ಹೆಲಿಕಾಪ್ಟರ್ ಸೈಬಿರಿಯಾದಲ್ಲಿ ಪತನವಾಗಿದ್ದು, ಘಟನೆಯಲ್ಲಿ ಸುಮಾರು 19 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಸುಮಾರು 22 ಮಂದಿಯನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಎಂಐ-8 ಹೆಲಿಕಾಪ್ಟರ್ ವಾಯುವ್ಯ ಸೈಬಿರಿಯಾದ ನೋವಿ ಉರಂಗೋಯ್ ಪಟ್ಟಣದ ಹೊರವಲಯದಲ್ಲಿ  ಪತನವಾಗಿದೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಹವಾಮಾನ ವೈಪರೀತ್ಯ ಹಾಗೂ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷವೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಘಟನಾ  ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡ ದೌಡಾಯಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಮೂವರನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ನೋವಿ ಉರಂಗೋಯ್ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ನಡೆಸಲಾಗುತ್ತಿದೆ. ತುರ್ತು ಲ್ಯಾಂಡಿಂಗ್ ವೇಳೆ ರಭಸವಾಗಿ ಹೆಲಿಕಾಪ್ಟರ್ ಕೆಳಕ್ಕೆ ಬಿದ್ದ ಪರಿಣಾಮ ಇಂಧನ  ಟ್ಯಾಂಕ್ ಸ್ಫೋಟವಾಗಿದೆ. ಪರಿಣಾಮ ಹೆಲಿಕಾಪ್ಟರ್ ಒಳಗಿದ್ದವರ ಪೈಕಿ 19 ಮಂದಿ ಸಾವಿಗೀಡಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರಷ್ಯನ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬೇಕೆಂದೇ ಗಡಿ ಉಲ್ಲಂಘಿಸಿದ ಪೈಲಟ್?
ಇನ್ನು ಹೆಲಿಕಾಪ್ಟರ್ ದುರಂತಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಮೂಡುತ್ತಿದ್ದು, ಹೆಲಿಕಾಪ್ಟರ್ ಪೈಲಟ್ ಬೇಕೆಂದೇ ತನ್ನ ಮಾರ್ಗ ಬದಲಿಸಿದನೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ  ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT