ವಿದೇಶ

ಭಾರತ, ಚೀನಾದಲ್ಲಿ ಮಾಲಿನ್ಯ ಹೆಚ್ಚಳ ಗಗನಯಾತ್ರಿ ಸ್ಕಾಟ್ ಕೆಲ್ಲಿ ಆತಂಕ

Vishwanath S

ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಒಂದು ವರ್ಷಗಳ ಕಾಲ ತಂಗಿದ್ದ ಗಗನಯಾತ್ರಿ ಸ್ಕಾಟ್ ಕೆಲ್ಲಿ ಭಾರತ ಮತ್ತು ಚೀನಾದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟವು ಆಘಾತಕಾರಿ ಎಂದು ಹೇಳಿದ್ದಾರೆ.

ಭಾರತ ಮತ್ತು ಚೀನಾ ಪ್ರದೇಶಗಳನ್ನು ವೀಕ್ಷಿಸಿದಾಗ ಅಲ್ಲಿ ಸದಾಕಾಲ ಮಾಲಿನ್ಯವಿರುವುದು ಸಾಕಷ್ಟು ಆಘಾತ ತಂದಿತು ಎಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜತೆ ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಮಾತುಗಳನ್ನು ಹಾಡಿದ್ದಾರೆ.

2015ರ ಬೇಸಿಗೆಯ ಒಂದು ದಿನ ಚೀನಾದ ಪೂರ್ವ ಭಾಗದಲ್ಲಿ ಸಂಪೂರ್ಣವಾಗಿ ಸ್ಪಷ್ಟತೆ ಇರುವುದು ಕಂಡುಬಂತು. ಬಾಹ್ಯಾಕಾಶದಲ್ಲಿ ನಾನಿದ್ದ ಒಂದು ವರ್ಷದಲ್ಲಿ ಯಾವ ದಿನವೂ ಇಷ್ಟೊಂದು ನಿರಾಳ ವಾತಾವರಣವನ್ನು ಆ ಪ್ರದೇಶದಲ್ಲಿ ನೋಡಿರಲಿಲ್ಲ. ಕಾರಣ ಅಂದು ಚೀನಾ ಕಲ್ಲಿದ್ದಲು ವಿದ್ಯುತ್ ಉತ್ಪಾದನೆ ಘಟಕವನ್ನು ಮುಚ್ಚಿತ್ತು. ಅಲ್ಲದೆ ಅಂದು ವಾಹನಗಳ ಓಡಾಟವನ್ನು ಕಡಿಮೆ ಮಾಡಿದ್ದರಿಂದ ಅಂದು ನಿರಾಳ ವಾತಾವರಣ ಕಾಣಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

SCROLL FOR NEXT