ಅಮೆರಿಕದಲ್ಲಿ ವಿದೇಶಿ ಮೂಲದ ಮಕ್ಕಳ ಜನನ: 3ನೇ ಸ್ಥಾನದಲ್ಲಿ ಭಾರತೀಯ ತಾಯಂದಿರು! 
ವಿದೇಶ

ಅಮೆರಿಕದಲ್ಲಿ ವಿದೇಶಿ ಮೂಲದ ಮಕ್ಕಳ ಜನನ: 3ನೇ ಸ್ಥಾನದಲ್ಲಿ ಭಾರತೀಯ ತಾಯಂದಿರು!

ಅಮೆರಿಕದಲ್ಲಿ ವಿದೇಶಿ ಮೂಲದ ಮಕ್ಕಳ ಜನನ ಹೆಚ್ಚುತ್ತಿದ್ದು, ಮೆಕ್ಸಿಕೋ ಹಾಗೂ ಚೀನಾ ತಾಯಂದಿರ ನಂತರದ ಸ್ಥಾನದಲ್ಲಿ ಭಾರತೀಯ ತಾಯಂದಿರಿದ್ದಾರೆ ಎಂದು ಇತ್ತೀಚಿನ ಅಧ್ಯಯನ ವರದಿ ಹೇಳುತ್ತಿದೆ.

ವಾಷಿಂಗ್ ಟನ್: ಅಮೆರಿಕದಲ್ಲಿ ವಿದೇಶಿ ಮೂಲದ ಮಕ್ಕಳ ಜನನ ಹೆಚ್ಚುತ್ತಿದ್ದು, ಮೆಕ್ಸಿಕೋ ಹಾಗೂ ಚೀನಾ ತಾಯಂದಿರ ನಂತರದ ಸ್ಥಾನದಲ್ಲಿ ಭಾರತೀಯ ತಾಯಂದಿರಿದ್ದಾರೆ ಎಂದು ಇತ್ತೀಚಿನ ಅಧ್ಯಯನ ವರದಿ ಹೇಳುತ್ತಿದೆ.

ವಿದೇಶಿ ಮೂಲದ ಮಹಿಳೆಯರು ಅಮೆರಿಕದಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಿರುವ ಪೈಕಿ ಮೊದಲೆರಡು ಸ್ಥಾನದಲ್ಲಿ ಮೆಕ್ಸಿಕೋ, ಚೀನಾ ಮೂಲದ ತಾಯಂದಿರಿದ್ದರೆ, ಮೂರನೇ ಸ್ಥಾನದಲ್ಲಿ ಭಾರತೀಯ ಮಹಿಳೆಯರಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರದ ಅಧ್ಯಯನ ವರದಿ ತಿಳಿಸಿದೆ.

ಭಾರತೀಯರು ವಿವಾಹವಾಗದೆ ಮಕ್ಕಳನ್ನು ಪಡೆಯುವ ಸಾಧ್ಯತೆ ಶೇ.1 ರಷ್ಟು ಮಾತ್ರವಿದ್ದು, ಅಮೆರಿಕದಲ್ಲಿ ಮಕ್ಕಳನ್ನು ಹೆರುವ ಶೇ.87 ರಷ್ಟು ಭಾರತೀಯ ಮಹಿಳೆಯರು ಡಿಗ್ರಿ ವ್ಯಾಸಂಗ ಪೂರ್ಣಗೊಳಿಸಿರುತ್ತಾರೆ ಹಾಗೂ ಅತ್ಯಧಿಕ ಆದಾಯ( ಯುಎಸ್ ಡಿ 104,500) ಹೊಂದಿರುತ್ತಾರೆ ಎಂದು ಪ್ಯೂ ಅಧ್ಯಯನ ವರದಿ ತಿಳಿಸಿದೆ. 2014 ರಲ್ಲಿ ಅಮೆರಿಕದಲ್ಲಿ 901,245 ವಿದೇಶಿ ಮೂಲದ ಮಕ್ಕಳು ಹುಟ್ಟಿದ್ದು, ಈ ಪೈಕಿ ಮೆಕ್ಸಿಕೋ ಮೂಲದ 287,052 ಮಕ್ಕಳು ಜನಿಸಿದ್ದರೆ ಚೀನಾ ಮೂಲದ 44,829 ಮಕ್ಕಳು ಜನಿಸಿವೆ ನಂತರದ ಸ್ಥಾನದಲ್ಲಿ ಭಾರತವಿದ್ದು ಭಾರತ ಮೂಲದ 43,364 ಮಕ್ಕಳು ಜನಿಸಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT