ವಿದೇಶ

ತಮ್ಮ ಕಚೇರಿಯಲ್ಲಿ ದೀಪಾವಳಿ ಆಚರಿಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

Lingaraj Badiger
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸೋಮವಾರ ವೈಟ್ ಹೌಸ್ ನ ತಮ್ಮ ಓವಲ್ ಕಚೇರಿಯಲ್ಲಿ ದೀಪ ಬೆಳಗಿಸುವ ಮೂಲಕ ಮೊದಲ ಬಾರಿ ದೀಪಾವಳಿ ಆಚರಿಸಿದರು. ಅಲ್ಲದೆ ತಮ್ಮ ನಂತರ ಬರುವ ಅಧ್ಯಕ್ಷರು ಈ ಸಂಪ್ರದಾಯ ಮುಂದುವರೆಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಬಾಮ ಅವರು 2009ರಲ್ಲಿ ವೈಟ್ ಹೌಸ್ ನಲ್ಲಿ ಮೊದಲ ಬಾರಿಗೆ ದೀಪಾವಳಿ ಆಚರಿಸಿದರು. ಅಂದಿನಿಂದ ಪ್ರತಿವರ್ಷ ದೀಪಾವಳಿ ಆಚರಿಸುತ್ತಿದ್ದಾರೆ.
2009 ರಲ್ಲಿ ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಮೊದಲ ಅಧ್ಯಕ್ಷ ಎಂಬ ಹೆಮ್ಮೆಯೂ ತಮಗೆ ಇದೆ. ಮುಂಬೈ ಭೇಟಿಯ ವೇಳೆ ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಒಬಾಮ, ಭಾರತೀಯರು ತಮ್ಮನ್ನು ಹೇಗೆ ಆತ್ಮೀಯವಾಗಿ ಸ್ವಾಗತಿಸಿ ತಮ್ಮೊಂದಿಗೆ ಕುಣಿದುಕುಪ್ಪಳಿಸಿ ಸಂಭ್ರಮವನ್ನು ಹಂಚಿಕೊಂಡರು ಎಂದು ಅಮೆರಿಕ ಅಧ್ಯಕ್ಷರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಬಾಮ ಅವರ ದೀಪಾವಳಿ ಆಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಗಮನ ಸೆಳೆದಿದೆ.
SCROLL FOR NEXT