ಇಮ್ರಾನ್ ಖಾನ್ ಹಾಗೂ ರೆಹಾಮ್ (ಸಂಗ್ರಹ ಚಿತ್ರ) 
ವಿದೇಶ

ಮದುವೆ ವಾರ್ಷಿಕೋತ್ಸವದ ಉಡುಗೊರೆ ಕೇಳಿದರೆ "ತಲಾಖ್" ಕೊಟ್ಟ ಇಮ್ರಾನ್ ಖಾನ್!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಹಿರಿಯ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ಅವರ ಮಾಜಿ ಪತ್ನಿ ವಾಗ್ದಾಳಿ ನಡೆಸಿದ್ದು, ಮದುವೆ ವಾರ್ಷಿಕೋತ್ಸವದ ಉಡುಗೊರೆ ಕೇಳಿದರೆ ವಿಚ್ಛೇದನ ಕೊಟ್ಟರು ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಹಿರಿಯ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ಅವರ ಮಾಜಿ ಪತ್ನಿ ವಾಗ್ದಾಳಿ ನಡೆಸಿದ್ದು, ಮದುವೆ ವಾರ್ಷಿಕೋತ್ಸವದ  ಉಡುಗೊರೆ ಕೇಳಿದರೆ ವಿಚ್ಛೇದನ ಕೊಟ್ಟರು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ಕೀಕ್ ಇ ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಾಮ್ ಅವರು,  ಕಳೆದ ಅಕ್ಟೋಬರ್ 31ರಂದು ನಮ್ಮ ಮದುವೆ ವಾರ್ಷಿಕೋತ್ಸವವಿತ್ತು. ಅಂದು ನಾನು ವಾರ್ಷಿಕೋತ್ಸವದ ಉಡುಗೊರೆ ಕೇಳಿದ್ದೆ. ಆದರೆ ಅವರು ಉಡುಗೊರೆ ಬದಲಾಗಿ ತಲಾಖ್ ನೀಡಿದರು.  ನನ್ನೊಂದಿಗೆ ಆದದ್ದು ಪಾಕಿಸ್ತಾನಕ್ಕೆ ಆಗದಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಸರ್ಕಾರದ ದುರಾಡಳಿತದ ವಿರುದ್ಧ ಇದೇ ನವೆಂಬರ್ 2ರಂದು ಇಮ್ರಾನ್ ಖಾನ್ ಅವರು ಪಾಕಿಸ್ತಾನ ಬಂದ್ ಗೆ ಕರೆ ನೀಡಿದ್ದು, ಇದರ ಹಿನ್ನಲೆಯಲ್ಲಿ ಪಾಕಿಸ್ತಾನದ ಜಿಯೋ  ಟಿವಿಯೊಂದಿಗೆ ಮಾತನಾಡಿದ್ದಾರೆ. "ನನ್ನ ಮತ್ತು ಇಮ್ರಾನ್ ಖಾನ್ ವಿಚ್ಛೇದನಕ್ಕೇ ಬೇರಾರೂ ಕಾರಣರಲ್ಲ. ನಮ್ಮ ನಿರ್ಧಾರಕ್ಕೆ ನಾವೇ ಹೊಣೆ. ಪರಸ್ಪರ ಚರ್ಚೆ ನಡೆಸಿಯೇ ನಮ್ಮ 10 ತಿಂಗಳ  ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದೆವು ಎಂದು ರೆಹಾಮ್ ಹೇಳಿದ್ದಾರೆ.

ಇದೇ ವೇಳೆ ತಲಾಖ್ ಪದ್ಧತಿಯನ್ನು ಪರೋಕ್ಷವಾಗಿ ವಿರೋಧಿಸಿರುವ ರೆಹಾಮ್, ಈ ದೇಶದ ಪ್ರಭಾವಿ ಪುರುಷನನ್ನು ವರಿಸಿದರೂ ಮಹಿಳಾ ನಿಂದನೆ ಮಾತ್ರ ನಿಲ್ಲುವುದಿಲ್ಲ ಎಂದು ರೆಹಾಮ್  ಹೇಳಿದರು.

ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿದ ರಾಜಕಾರಣದತ್ತ ಮುಖ ಮಾಡಿ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷ ಸ್ಥಾಪನೆ ಮಾಡಿರುವ ಇಮ್ರಾನ್ ಖಾನ್ ಅವರು, ಕಳೆದ ವರ್ಷವಷ್ಟೇ ಟಿವಿ ನಿರೂಪಕಿ  ರೆಹಾಮ್ ರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಕೇವಲ 10 ತಿಂಗಳಲ್ಲೇ ಅಂದರೆ ಕಳೆದ ಅಕ್ಟೋಬರ್ ನಲ್ಲಿ ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT