ಇಸ್ಲಾಮಾಬಾದ್: ಬಲೋಚಿಸ್ತಾನ್ ಪ್ರಾಂತ್ಯದ ಸಮಸ್ಯೆಗೆ ಭಾರತ ಕಾರಣ ಎಂದು ಪಾಕಿಸ್ತಾನ ಮಾಜಿ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರು ಶನಿವಾರ ಆರೋಪಿಸಿದ್ದಾರೆ.
ಆಸಿಫ್ ಅಲಿ ಜರ್ದಾರಿ ಅವರ ಪಿಪಿಪಿ ಸರ್ಕಾರದಲ್ಲಿ ಆಂತರಿಕ ಸಚಿವರಾಗಿದ್ದ ರೆಹಮಾನ್ ಅವರು, ಸಂಪತ್ಬರಿತ ಬುಡಕಟ್ಟು ಪ್ರದೇಶದಲ್ಲಿ ಭಾರತ ಪ್ರತ್ಯೇಕವಾದಿಗಳಿಗೆ ಸಹಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೆಹಮಾನ್ ಮಲಿಕ್, ಭಾರತ ಬಲೋಚಿಸ್ತಾನದಲ್ಲಿ ಪೂರ್ವ ಪಾಕಿಸ್ತಾನದಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಭಾರತ ಹಾಗೂ ಅಫ್ಘಾನಿಸ್ತಾನದ ಪ್ರತ್ಯೇಕವಾದಿ ಮುಕ್ತಿ ಬಹಿನಿಗೆ ಸಹಕಾರ ನೀಡುತ್ತಿವೆ ಎಂದು ಹೇಳಿದ್ದಾರೆ.
ಬಲೋಚಿಸ್ತಾನದಲ್ಲಿನ ಹಿಂಸಾಚಾರಕ್ಕೆ ಭಾರತವೇ ಕಾರಣ ಎಂಬುದು ರಹಸ್ಯ ವಿಚಾರವೇನಲ್ಲ ಎಂದಿರುವ ಮಾಜಿ ಸಚಿವ, ಈ ಹಿಂದಿನ ಪಿಪಿಪಿ ಸರ್ಕಾರ ಬಲೋಚಿಸ್ತಾನ ವಿಷಯವನ್ನು ಭಾರತದೊಂದಿಗೆ ಪ್ರಸ್ತಾಪ ಮಾಡಿತ್ತು ಎಂದು ಹೇಳಿದ್ದಾರೆ.