ಟೈಮ್ಸ್ ಸ್ಕ್ವೇರ್ ನಲ್ಲಿ ನಾವಿಕನೊಬ್ಬ ಗ್ರೇಟಾ ಫ್ರಿಡ್ ಮ್ಯಾನ್ ಎಂಬ ಮಹಿಳೆಗೆ ಚುಂಬಿಸಿದ್ದ ವಿಶ್ವವಿಖ್ಯಾತ ಫೋಟೋ 
ವಿದೇಶ

ಎರಡನೇ ವಿಶ್ವಯುದ್ಧದ ವಿಶ್ವವಿಖ್ಯಾತ ಫೋಟೋದಲ್ಲಿ ಚುಂಬಿಸಿದ್ದ ನರ್ಸ್ ನಿಧನ

1945 ರಲ್ಲಿ ಎರಡನೇ ವಿಶ್ವ ಯುದ್ಧ ಮುಗಿದ ಸಂದರ್ಭದಲ್ಲಿ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ನಾವಿಕನೊಬ್ಬ ಗ್ರೇಟಾ ಫ್ರೀಡ್ ಮ್ಯಾನ್ ಎಂಬ ಮಹಿಳೆಗೆ ಚುಂಬಿಸಿದ್ದ ಚಿತ್ರ ವಿಶ್ವವಿಖ್ಯಾತ ಫೋಟೋ!

ವಾಶಿಂಗ್ಟನ್: 1945 ರಲ್ಲಿ ಎರಡನೇ ವಿಶ್ವ ಯುದ್ಧ ಮುಗಿದ ಸಂದರ್ಭದಲ್ಲಿ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ನಾವಿಕನೊಬ್ಬ ಗ್ರೇಟಾ ಫ್ರೀಡ್ ಮ್ಯಾನ್ ಎಂಬ ಮಹಿಳೆಗೆ ಚುಂಬಿಸಿದ್ದ ಚಿತ್ರ ವಿಶ್ವವಿಖ್ಯಾತ ಫೋಟೋ! ಈಗ ಆ ಮಹಿಳೆ ಮೃತಪಟ್ಟಿದ್ದಾರೆ ಎದು ವರದಿ ತಿಳಿಸಿದೆ. 
ಮಹಿಳೆಯ ಪುತ್ರ ಜೋಶುವಾ ಫ್ರೀಡ್ ಮ್ಯಾನ್ ಈ ವಿಷಯವನ್ನು ಸಿ ಎನ್ ಎನ್ ಗೆ ಶನಿವಾರ ತಿಳಿಸಿದ್ದು, 92 ನೇ ವಯಸ್ಸಿನ ತಮ್ಮ ತಾಯಿ ವರ್ಜಿನಿಯಾದ ರಿಚ್ಮಂಡ್ ನಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. 
ಯುದ್ಧ ಮುಗಿದ ಸಮಯದಲ್ಲಿ ತೆಗೆಯಲಾಗಿದ್ದ ಈ ಕಪ್ಪು ಬಿಳುಪಿನ ಚಿತ್ರ ಪ್ರೀತಿಯ ಸಂಕೇತವಾಗಿ ಬಹಳಷ್ಟು ವರ್ಷಗಳಿದ ಜನಪ್ರಿಯವಾಗುತ್ತಲೇ ಹೋಗಿತ್ತು. 
"ನನ್ನ ತಾಯಿಯ ಬಳಿ ಎಷ್ಟೋ ಅನುಭವಗಳು, ಕಥೆಗಳಿದ್ದವು. ಅವುಗಳಲ್ಲಿ ಇದು ಒಂದು" ಎಂದು ಈ ದಂತಕತೆಯ ಫೋಟೋ ಬಗ್ಗೆ ಜೋಶುವಾ ಫ್ರಿಡ್ ಮ್ಯಾನ್ ಹೇಳಿದ್ದಾರೆ. 
ಜಪಾನ್ ದೇಶ ಅಮೆರಿಕಾಕ್ಕೆ ಶರಣಾಗಿ ಎರಡನೇ ವಿಶ್ವಯುದ್ಧ ಕೊನೆಗೊಂಡಿದೆ ಎಂದು ಘೋಷಣೆಯಾದಾಗ 21 ವರ್ಷದ ದಂತ ವೈದ್ಯಕೀಯ ಸೇವಕಿ ಫ್ರೀಡ್ ಮ್ಯಾನ್ ಟೈಮ್ಸ್ ಸ್ಕ್ವೇರ್ ನಲ್ಲಿದ್ದರು ಎಂದು ವರದಿ ತಿಳಿಸಿದೆ. 
ಖ್ಯಾತ ಛಾಯಾಗ್ರಾಹಕ ಆಲ್ಫ್ರೆಡ್ ಐಸೆನ್ಸ್ಟೆಡ್ತ್ ಈ ಫೋಟೋ ಕ್ಲಿಕ್ಕಿಸಿದ್ದರು ಮತ್ತು ಕೆಲವು ವಾರಗಳ ನಂತರ ಲೈಫ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆದರೆ ಆಗ ಫೋಟೋದಲ್ಲಿದ್ದ ವ್ಯಕ್ತಿಗಳು ಗುರುತು ಯಾರಿಗೂ ತಿಳಿದಿರಲಿಲ್ಲ. ಈ ವಿಷಯ 1980 ರಲ್ಲಿ ಬಹಿರಂಗವಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT