ವಿದೇಶ

ಭಾರತಕ್ಕೆ ಹೊರಟ ನೇಪಾಳ ಪ್ರಧಾನಿ ಪುಷ್ಪ್ ಕಮಲ್ ದಹಲ್

Srinivas Rao BV

ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪ್ ಕಮಲ್ ದಹಲ್ ಭಾರತಕ್ಕೆ ಭೇಟಿ ನೀಡಲು ನೇಪಾಳದಿಂದ ಹೊರಟಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ವಿದೇಶ ಪ್ರವಾಸವನ್ನು ಭಾರತಕ್ಕೆ ಕೈಗೊಂಡಿರುವ ನೇಪಾಳ ಪ್ರಧಾನಿ ನಿಯೋಗದಿಂದಿಗೆ ಆಗಮಿಸುತ್ತಿದ್ದು, ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದಾರೆ.

ಪುಷ್ಪ್ ಕಮಲ್ ದಹಲ್( ಪ್ರಚಂಡ) ಅವರ ಪತ್ನಿ ಸಹ ಭಾರತಕ್ಕೆ ಆಗಮಿಸುತ್ತಿದ್ದು, ಪ್ರಧಾನಿಯೊಂದಿಗೆ ವಿದೇಶಾಂಗ ಸಚಿವ ಪ್ರಕಾಶ್ ಶರಣ್ ಮಹಾತ್, ಸಾರಿಗೆ ಸಚಿವ ರಮೇಶ್ ಲೇಖಕ್ ಅವರು ನಾಲ್ಕು ದಿನಗಳ ಪ್ರವಾಸದಲ್ಲಿ ಇರಲಿದ್ದಾರೆ. ಸೆ.16 ರಂದು ಪ್ರಚಂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ.

SCROLL FOR NEXT