ಇಸ್ಲಾಮಾಬಾದ್: ಕರಾಚಿ ಮೂಲದ ಅವಮ್ ಎಕ್ಸ್ ಪ್ರೆಸ್ ರೈಲು ಮುಲ್ತಾನ ಸಮೀಪ ಸರಕು ರೈಲಿಗೆ ಢಿಕ್ಕಿ ಹೊಡೆದು ಕನಿಷ್ಠ ಆರು ಮಂದಿ ಮೃತಪಟ್ಟು 150ಕ್ಕೂ ಹೆಚ್ಚು ಜನರಿಗೆ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಗಾಯಗೊಂಡವರಲ್ಲಿ 10 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಗಾಡಿಯ ಒಳಗೆ ಸಿಕ್ಕಿಹಾಕಿಕೊಂಡ ಮೂವರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ.
ಶೇರ್ ಶಾಹ್ ಪ್ರದೇಶದಲ್ಲಿ ಬುಚ್ಚ ರೈಲ್ವೆ ನಿಲ್ದಾಣದ ಸಮೀಪ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಅವಮ್ ಎಕ್ಸ್ ಪ್ರೆಸ್ ನ 4 ಬೋಗಿಗಳು ಉರುಳಿಬಿದ್ದಿವೆ. ಢಿಕ್ಕಿ ಸಂಭವಿಸಿದ್ದರಿಂದ ರೈಲಿನ ಎಂಜಿನ್ ಮತ್ತು ವಿದ್ಯುತ್ ವಾಹಕಗಳು ಧ್ವಂಸಗೊಂಡಿದ್ದು, 4 ಬೋಗಿಗಳು ಉರುಳಿಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಭಾರೀ ಕತ್ತಲು ಇರುವುದರಿಂದ ಮತ್ತು ಈದ್ ಹಬ್ಬದ ಪ್ರಯುಕ್ತ ಅನೇಕ ರಕ್ಷಣಾ ಕೆಲಸಗಾರರು ರಜೆ ಮೇಲೆ ತೆರಳಿದ್ದರಿಂದ ಆರಂಭದಲ್ಲಿ ರಕ್ಷಣಾ ಕಾರ್ಯ ವಿಳಂಬಗತಿಯಲ್ಲಿ ಸಾಗಿತ್ತು.
ಅವಮ್ ರೈಲು ಪೇಶಾವರದಿಂದ ಕರಾಚಿಗೆ ತೆರಳುತ್ತಿತ್ತು.