ವಿದೇಶ

ಇಸ್ರೇಲ್- ಅಮೆರಿಕ ನಡುವೆ 38 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ನೆರವಿನ ಒಪ್ಪಂದ

Srinivas Rao BV

ವಾಷಿಂಗ್ ಟನ್: 2019-2028 ವರೆಗೆ ಒಪ್ಪಂದ ಅಸ್ತಿತ್ವದಲ್ಲಿರಲಿದ್ದು, 33 ಬಿಲಿಯನ್ ಡಾಲರ್ ನಷ್ಟು ವಿದೇಶಿ ಸೇನಾ ಹಣಕಾಸು ನಿಧಿ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಅಂದರೆ 5 ಬಿಲಿಯನ್ ಡಾಲರ್ ನ ಕ್ಷಿಪಣಿ ರಕ್ಷಣಾ ನೆರವನ್ನು ಇಸ್ರೇಲ್ ಅಮೆರಿಕದಿಂದ ಪಡೆದುಕೊಳ್ಳಲಿದೆ.

ಈ ಹಿಂದೆ 2007 ರಲ್ಲಿ ನಡೆದಿದ್ದ ಒಪ್ಪಂದ 2018 ಕ್ಕೆ ಮುಕ್ತಾಯಗೊಳ್ಳಲಿದ್ದು, ಆ ನಂತರದ ಆರ್ಥಿಕ ವರ್ಷ(2019) ರ ವೇಳೆಗೆ ಹೊಸ ಒಪ್ಪಂದ ಜಾರಿಗೆ ಬರಲಿದೆ. ಅಮೆರಿಕದ ರಕ್ಷಣಾ ಅಧೀನ ಕಾರ್ಯದರ್ಶಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮ್ಮುಖದಲ್ಲಿ ಇಸ್ರೇಲ್ ನ ಹಂಗಾಮಿ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಒಪ್ಪಂದಕ್ಕೆ ಸಹಿಹಾಕಲಾಗಿದೆ.

ಒಪ್ಪಂದ ನಡೆಯುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇಸ್ರೇಲ್ ನೊಂದಿಗೆ ನಡೆಯಲಿರುವ ರಕ್ಷಣಾ ನೆರವಿನ ಒಪ್ಪಂದ ಅಲ್ಲಿನ ಭದ್ರತೆಗೆ ಅಮೆರಿಕದ ಬದ್ಧತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದರು.

SCROLL FOR NEXT