ವಾಷಿಂಗ್ ಟನ್: ಭಾರತದ ವಿರುದ್ಧ ಪಾಕಿಸ್ತಾನ ಅಣ್ವಸ್ತ್ರ ಯುದ್ಧ ಬೆದರಿಕೆ ಹಾಕಿರುವುದನ್ನು ಅಮೆರಿಕ ತೀವ್ರವಾಗಿ ವಿರೋಧಿಸಿದ್ದು, ಕಠಿಣ ಸಂದೇಶ ರವಾನೆ ಮಾಡಿದೆ.
ಪಾಕಿಸ್ತಾನಕ್ಕೆ ಕಠಿಣ ರವಾನೆ ಮಾಡಿರುವ ಅಮೆರಿಕ ಸರ್ಕಾರಿ ವಕ್ತಾರರು, ಅಣ್ವಸ್ತ್ರ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನಕ್ಕೆ ನಾವು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿ ಭಯೋತ್ಪಾದಕರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುವ ಬೆದರಿಕೆಯೊಡ್ಡಿತ್ತು.
ಈ ಬೆನ್ನಲ್ಲೇ ಅಮೆರಿಕ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನೆ ಮಾಡಿದ್ದು ಅಮೆರಿಕ ಪಾಕಿಸ್ತಾನದ ಬೆದರಿಕೆಯನ್ನು ಆಕ್ಷೇಪಿಸುವುದಾಗಿ ಅಲ್ಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ ಒಂದು ವೇಳೆ ಯುದ್ಧ ಸಾರಿದರೆ ಖಂಡಿತಾ ಅದನ್ನು ಸರ್ವನಾಶ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇದೆ. ನಮ್ಮಲ್ಲಿಯೂ ಕೂಡ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳಿವೆ. ಹಾಗೆಂದ ಮಾತ್ರಕ್ಕೆ ಅವೇನೂ ಪ್ರದರ್ಶನದ ವಸ್ತುಗಳಲ್ಲ. ಸಮಯ ಮತ್ತು ಅನಿವಾರ್ಯತೆ ಸೃಷ್ಟಿಯಾದರೆ ಅವುಗಳ ಬಳಕೆಗೆ ನಾವು ಹಿಂಜರಿಯುವುದಿಲ್ಲ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದರು.