ವಿದೇಶ

ಐಫೋನ್ ಚಾರ್ಜಿಂಗ್ ಗೆ ಹಾಕಿ ಮಲಗಿದ್ದಾತನಿಗೆ ಕರೆಂಟ್ ಶಾಕ್!

Srinivasamurthy VN

ನ್ಯೂಯಾರ್ಕ್: ಮೊಬೈಲ್ ಅನ್ನು ಚಾರ್ಜಿಂಗ್ ಗೆ ಹಾಕಿ ಮಲಗುವ ಅಭ್ಯಾಸವೇನಾದರೂ ಇದ್ದರೆ ಅದನ್ನು ಕೂಡಲೇ ಬಿಟ್ಟು ಬಿಡಿ. ನಿಮಗೆ ಶಾಕ್ ನೀಡುವ ಸುದ್ದಿ ಇಲ್ಲಿದ್ದು, ಚಾರ್ಜಿಂಗ್ ಹಾಕಿ ಮಲಗಿದ್ದಾತನಿಗೆ ವಿದ್ಯುತ್ ಶಾಕ್  ಹೊಡೆದಿರುವ ಘಟನೆ ಅಮೆರಿಕದ ಅಲಬಾಮದಲ್ಲಿ ನಡೆದಿದೆ.

ಕಳೆದ ಮಾರ್ಚ್ 23 ರಾತ್ರಿ ವಿಲೇ ಡೇ ಎಂಬಾತ ತನ್ನ ಐಫೋನ್ ಅನ್ನು ಚಾರ್ಜಿಂಗ್ ಹಾಕಿ ಪಕ್ಕದಲ್ಲೇ ಮಲಗಿದ್ದಾನೆ. ರಾತ್ರಿ ಇಡೀ ಚಾರ್ಜ್ ಆದ ಫೋನ್ ಬ್ಯಾಟರಿ ಫುಲ್ ಆಗುತ್ತಿದ್ದಂತೆಯೇ ವಿದ್ಯುತ್ ಚಾರ್ಜಿಂಗ್ ವೈರ್ ಮೂಲಕ ವಿಲೇ  ಡೇ ದೇಹಕ್ಕೂ ಹರಿದಿದೆ. ಇದರಿಂದ ವಿಲೇ ಡೇ ಕೂಡಲೇ ಎಚ್ಚೆತ್ತನಾದರೂ ವಿದ್ಯುತ್ ಶಾಕ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಗಿಲ್ಲ. ಚಾರ್ಜಿಂಗ್ ವೈರ್ ಲೋಹ ಹೊರ ಮೈ ಹೊಂದಿದ್ದರಿಂದ ಅದರ ಮೂಲಕವಾಗಿ ವಿದ್ಯುತ್ ವಿಲೇಡೇ  ದೇಹಕ್ಕೂ ಪಸರಿಸಿದೆ.

ಕೆಲವೇ ಕ್ಷಣಗಳಲ್ಲಿ ವಿಲೇಡೇ ದೇಹ ಶೇ.35ರಷ್ಟು ಸುಟ್ಟುಹೋಗಿದೆ. ವಿದ್ಯುತ್ ಶಾಕ್ ನಿಂದ ವಿಲೇಡೇ ಒದ್ದಾಡಿದ ಪರಿಣಾಮ ವೈರ್ ಸ್ವಿಚ್ ಬೋರ್ಡ್ ನಿಂದ ಕಿತ್ತು ಬಂದಿದೆ. ಆಗ ವಿದ್ಯುತ್ ಪ್ರಸರಣ ನಿಂತಿದ್ದರಿಂದ ವಿಲೇಡೇ  ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಸ್ತುತ ಅಲಬಾಮಾದ ಆಸ್ಪತ್ರೆಯಲ್ಲಿ ವಿಲೇ ಡೇ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಖಾಸಗಿ ಸುದ್ದಿಸಂಸ್ಥೆಗೆ ಈ ಬಗ್ಗೆ ವಿಲೇ ಡೇ ಮಾಹಿತಿ ನೀಡಿದ್ದು, ಯಾರೂ ಕೂಡ ಮಲಗಿದ್ದ  ಸ್ಥಳದಲ್ಲೇ ಮೊಬೈಲ್ ಅನ್ನು ಚಾರ್ಜಿಂಗ್ ಗೆ ಹಾಕಬೇಡಿ ಎಂದು ಸಲಹೆ ನೀಡಿದ್ದಾನೆ. ಈ ಸುದ್ದಿ ಇದೀಗ ವಿಶ್ವಾದ್ಯಂತ ವೈರಲ್ ಆಗಿದೆ.

ವೈದ್ಯರು ತಿಳಿಸಿರುವಂತೆ ಮೊಬೈಲ್ ಚಾರ್ಜಿಂಗ್ ಬಳಸುವ ಚಾರ್ಜರ್ 110 ವೋಲ್ಟೇಜ್ ನ ಸಾಮರ್ಥ್ಯವನ್ನು ಹೊಂದಿದ್ದು, ಇದು ಮನುಷ್ಯನನ್ನು ಕೊಲ್ಲಬಹುದಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.

SCROLL FOR NEXT