ಎಸ್ಎಎಸ್ಇಸಿ 
ವಿದೇಶ

ಎಸ್ಎಎಸ್ಇಸಿ ಗೆ ಮಾಯನ್ಮಾರ್ ಹೊಸ ಸೇರ್ಪಡೆ: ಅರುಣ್ ಜೇಟ್ಲಿಯಿಂದ ಸ್ವಾಗತ

ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರ ಸಂಘಟನೆ(ಎಸ್ಎಎಸ್ಇಸಿ)ಗೆ ಮಾಯನ್ಮಾರ್ ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದೆ.

ನವದೆಹಲಿ: ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರ ಸಂಘಟನೆ(ಎಸ್ಎಎಸ್ಇಸಿ)ಗೆ ಮಾಯನ್ಮಾರ್ ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸ ಸದಸ್ಯ ರಾಷ್ಟ್ರವನ್ನು ಸ್ವಾಗತಿಸಿದ್ದಾರೆ. 
ಎಸ್ಎಎಸ್ಇಸಿ ರಾಷ್ಟ್ರಗಳ ಹಣಕಾಸು ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಜೇಟ್ಲಿ, ಮಾಯನ್ಮಾರ್ ಸೇರ್ಪಡೆ ದಕ್ಷಿಣ ಏಷ್ಯಾವನ್ನು ಪೂರ್ವ ಏಷ್ಯಾ ಹಾಗೂ ಆಗ್ನೇಯ ಏಷ್ಯಾದೊಂದಿಗೆ ಬೆಸೆಯಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರದ ಭಾಗವಾಗಿದ್ದು, ಮಾಯನ್ಮಾರ್ ಸೇರ್ಪಡೆಯಿಂದ ಈಶಾನ್ಯ ಪ್ರದೇಶಕ್ಕೂ ಎಸ್ಎಎಸ್ಇಸಿ ವಿಸ್ತರಣೆಯಾಗಿದೆ. ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ರಾಷ್ಟ್ರಗಳೊಂದಿಗೆ ಈಗ ಹೊಸದಾಗಿ ಮಾಯನ್ಮಾರ್ ಸೇರ್ಪಡೆಯಾಗಿದ್ದು, ಎಸ್ಎಎಸ್ಇಸಿ ಸದಸ್ಯ ರಾಷ್ಟ್ರಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. 
ಸಾಮೂಹಿಕ ದೂರದೃಷ್ಟಿ ಉಪ ಪ್ರಾಂತೀಯ ಅಭಿವೃದ್ಧಿಗೆ ನೆರವಾಗಲಿದ್ದು, ಸುಧಾರಿತ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT