ತೆಹ್ರಾನ್: ಸಿರಿಯಾ ಸೇನಾ ನೆಲೆಗಳ ಮೇಲೆ ಅಮೆರಿಕಾ ನಡೆಸಿರುವ ದಾಳಿಗೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕೆಮಿಕಲ್ ದಾಳಿಯನ್ನು ಖಂಡಿಸಿ ಅಮೆರಿಕ ಸೇನೆ ನಡೆಸುತ್ತಿರುವ ಕ್ಷಿಪಣಿ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಇರಾನ್ ನ ವಿದೇಶಾಂಗ ಸಚಿವಾಲಯದ ವಕ್ತಾರರು ಅಮೆರಿಕಾ ನಡೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಇರಾನ್ ಹಾಗೂ ರಷ್ಯಾ ಸಿರಿಯಾಗೆ ಪರಮಾಪ್ತ ರಾಷ್ಟ್ರಗಳಾಗಿವೆ. ಸಿರಿಯಾ ಅಧ್ಯಕ್ಷ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರಕ್ಕೆ ರಷ್ಯಾ ಶಸ್ತ್ರಾಸ್ತ್ರಗಳು, ಸಲಹೆಗಾರರು, ಹಣಕಾಸಿನ ನೆರವು ಸೇರಿದಂತೆ ವಿವಿಧ ರೀತಿಗಳಲ್ಲಿ ನೆರವು ನೀಡಿದೆ.
ಸಿರಿಯಾ ಮೇಲೆ ಅಮೆರಿಕಾದ ಕಾರ್ಯತಂತ್ರವೇನಿದೆಯೋ ಅದನ್ನು ಜಾರಿಗೆ ತರುವಂತೆ ಡೊನಾಲ್ಡ್ ಟ್ರಂಪ್ ಗೆ ರಷ್ಯಾ ಸವಾಲು ಹಾಕಿದ್ದ ಬೆನ್ನಲ್ಲೇ ಅಮೆರಿಕಾ ಸಿರಿಯಾ ಮೇಲೆ ದಾಳಿ ನಡೆಸಿದೆ.