ವಿದೇಶ

101 ದೇಶಗಳ ಜನರಿಗೆ ಒಟ್ಟಿಗೆ ಉಪಹಾರ ನೀಡಿ ಗಿನ್ನೆಸ್ ದಾಖಲೆ ಮಾಡಿದ ದುಬೈ ಗುರುದ್ವಾರ

Sumana Upadhyaya
ಯುನೈಟೆಡ್ ಅರಬ್ ಎಮಿರೇಟ್ಸ್: ವಿವಿಧ ದೇಶಗಳ ಜನರಿಗೆ ಉಚಿತವಾಗಿ ಬೆಳಗಿನ ಉಪಹಾರ ನೀಡುವ ಮೂಲಕ ದುಬೈಯ ಗುರುದ್ವಾರ ವಿಶ್ವ ದಾಖಲೆ ಮುರಿದಿದೆ. ಗುರುದ್ವಾರ ಗುರು ನಾನಕ್ ದರ್ಬಾರ್, ಜಬೆಲ್ ಆಲಿ ಗಾರ್ಡನ್ಸ್ ಎಂಬಲ್ಲಿ ಒಂದು ಗಂಟೆಯ ಕಾರ್ಯಕ್ರಮದಲ್ಲಿ 101 ದೇಶಗಳ 600 ಜನರಿಗೆ ಬೆಳಗಿನ ಉಪಹಾರ ನೀಡುವ ಮೂಲಕ ಮೊನ್ನೆ ಗುರುವಾರ ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ.
ಶಾಲಾ ಮಕ್ಕಳು, ಸರ್ಕಾರಿ ಅಧಿಕಾರಿಗಳು ಮತ್ತು ರಾಯಭಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ ನ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಮುಖ್ಯ ಅತಿಥಿಯಾಗಿದ್ದರು.
ಜಬೇಲ್ ಆಲಿ ಗಾರ್ಡನ್ಸ್ ನಗರಕ್ಕೆ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು. ಬೆಳಗಿನ ಉಪಹಾರದ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಸವಿದರು.
ಗುರುದ್ವಾರ ಈ ಹಿಂದಿನ ದಾಖಲೆಯಾದ 55 ದೇಶಗಳ ಜನರು ಉಪಹಾರ ಸೇವಿಸಿದ್ದ ದಾಖಲೆಯನ್ನು ಮುರಿಯಿತು ಎಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನ ಅಧಿಕಾರಿಗಳು ದೃಢಪಡಿಸಿದ್ದಾರೆ.
ಸಮುದಾಯ ಅಡುಗೆ ಮನೆ ಮೂಲಕ ಬಂದ ಅತಿಥಿಗಳಿಗೆ ಉಚಿತ ಊಟ, ತಿಂಡಿ ನೀಡುವ ಯುನೈಟೆಡ್ ಅರಬ್ ಎಮಿರೇಟ್ಸ್ ನ ಗುರುದ್ವಾರದಲ್ಲಿ 50,000 ಸಿಖ್ ಅನುಯಾಯಿಗಳಿದ್ದಾರೆ.
ಗುರುದ್ವಾರ ದಾನ ಮತ್ತು ಸ್ವಯಂ ಸೇವೆಗಳನ್ನು ಭಾರತೀಯ ಸಮುದಾಯ ಮಾತ್ರವಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರದಲ್ಲಿ ಕೂಡ ನೀಡುತ್ತಿದೆ. ಸಮಾಜದ ಜನತೆಗೆ ನಿಸ್ವಾರ್ಥ ಸೇವೆ ನೀಡುವಲ್ಲಿ ನಿರತರಾಗಿದ್ದೇವೆ ಎಂದು ಗುರುದ್ವಾರ ಗುರು ನಾನಕ್ ದರ್ಬಾರ್ ದೇವಸ್ಥಾನದ ಅಧ್ಯಕ್ಷ ಸುರೇಂದರ್ ಕಂದಾರಿ ತಿಳಿಸಿದ್ದಾರೆ.
SCROLL FOR NEXT