ವಿದೇಶ

ಕೊಲಂಬಿಯ ನೈಟ್ ಕ್ಲಬ್ ಮೇಲೆ ಗ್ರೆನೇಡ್ ದಾಳಿ: 36 ಜನರಿಗೆ ಗಾಯ

Manjula VN
ಬೊಗೊತಾ: ಕೊಲಂಬಿಯಾದ ಸನ್ ಪೆಡ್ರೋದಲ್ಲಿರುವ ನೈಟ್ ಕ್ಲಬ್ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ 36 ಜನರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ. 
ಶನಿವಾರ ತಡರಾತ್ರಿ ನೈಟ್ ಕ್ಲಬ್ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿತ್ತು. ನೈಟ್ ಕ್ಲಬ್ ಮಾಲೀಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಘಟನೆ ಹಿಂದೆ ಉಗ್ರರು ಅಥವಾ ಮಾದಕ ಸಾಗಣೆದಾರರು ಇದ್ದಾರೆಯೋ ಎಂಬುದರ ಬಗ್ಗೆ ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಗಾಯಾಳುಗಳು ಪ್ರಸ್ತುತ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 36 ಮಂದಿಯ ಪೈಕಿ ಇಬ್ಬರ ಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
SCROLL FOR NEXT