ವಿಶ್ವಸಂಸ್ಥೆ: ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲು ವಿಶ್ವಸಂಸ್ಥೆ ಸಿದ್ಧತೆ ನಡೆಸಿದ್ದು, ಯೋಗದ ಆಸನಗಳನ್ನು ಚಿತ್ರಿಸಿರುವ ಸ್ಟ್ಯಾಂಪ್ ಗಳನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ ನಿರ್ಧರಿಸಿದೆ.
ವಿಶ್ವಸಂಸ್ಥೆಯ ಪೋಸ್ಟಲ್ ಆಡಳಿತ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, 1.15 ಡಾಲರ್ ಮುಖಬೆಲೆಯ ಸ್ಟ್ಯಾಂಪ್( ಅಂಚೆ ಚೀಟಿ) ಗಳಲ್ಲಿ ದೇವನಾಗರಿ ಭಾಷೆಯಲ್ಲಿ ಓಂ ಹಾಗೂ ಆಸನಗಳನ್ನು ಮುದ್ರಿಸಿ ಬಿಡುಗಡೆ ಮಾಡಲಿದೆ.
2016 ರಲ್ಲಿ ವಿಶ್ವಸಂಸ್ಥೆಯ ಪೋಸ್ಟಲ್ ಆಡಳಿತ, ಯುಎನ್ ಪಿಎ ಎಂಎಸ್ ಸುಬ್ಬಲಕ್ಷ್ಮಿ ಅವರಿಗೆ ಗೌರವ ಸೂಚಿಸಲು ಹಾಗೂ 1966 ರಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದಿದ್ದ ಸುಬ್ಬಲಕ್ಷ್ಮಿ ಅವರ ಕಾನ್ಸರ್ಟ್ ನ 50 ನೇ ವರ್ಷಾಚರಣೆಗಾಗಿ ಸ್ಟ್ಯಾಂಪ್ ನ್ನು ಬಿಡುಗಡೆ ಮಾಡಿತ್ತು.
ಈ ಬಾರಿ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಯೋಗಾ ಸ್ಟ್ಯಾಂಪ್ ಗಳನ್ನು ಬಿಡುಗಡೆ ಮಾಡಲು ವಿಶ್ವಸಂಸ್ಥೆ ನಿರ್ಧರಿಸಿದೆ.