ವಿದೇಶ

ಪ್ರಧಾನಿ ಇಸ್ರೇಲ್ ಭೇಟಿ ವೇಳೆ ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಸಹಿ ಸಾಧ್ಯತೆ

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಧ್ಯದಲ್ಲೇ ಇಸ್ರೇಲ್ ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಭಾರತೀಯ ನೌಕಾಪಡೆಗೆ ವಾಯು ರಕ್ಷಣಾ ವ್ಯವಸ್ಥೆ ಸೇರಿದಂತೆ ಪ್ರಮುಖ ರಕ್ಷಣಾ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳೂ ಒಪ್ಪಂದ ಹಾಕುವ ಸಾಧ್ಯತೆ ಇದೆ. 
ಇಸ್ರೇಲ್ ಗೆ ಭೇಟಿ ನೀಡಲಿರುವ ಮೊದಲ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಲಿದ್ದು, ಜುಲೈ ನಲ್ಲಿ ಮೋದಿ ಇಸ್ರೇಲ್ ಗೆ ತೆರಳಲಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಇಸ್ರೇಲ್ ನ ರಾಯಭಾರಿ ಡ್ಯಾನಿಯಲ್ ಕಾರ್ಮನ್ " ಪ್ರಧಾನಿ ಮೋದಿ ಅವರದ್ದು ಐತಿಹಾಸಿಕ ಭೇಟಿಯಾಗಲಿದೆ ಎಂದು ಹೇಳಿದ್ದು, ಉಭಯ ದೇಶಗಳ ನಡುವಿನ ಮಹತ್ವದ ವಿಚಾರಗಳ ಬಗೆಗಿನ ಸಹಕಾರ ಮತ್ತಷ್ಟು ವೃದ್ಧಿಸಲಿದೆ ಎಂಬ ಸುಳಿವು ನೀಡಿದ್ದಾರೆ. 
ಇಸ್ರೇಲ್ ನ ಬರಾಕ್-8 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ನ್ನು ಭಾರತದ ನೌಕಾಪಡೆಗೆ ಅಳವಡಿಸಿಕೊಳ್ಳುವುದು ಸೇರಿದಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಒಪ್ಪಂದಗಳು ನಡೆಯುವ ನಿರೀಕ್ಷೆ ಇದೆ. 
SCROLL FOR NEXT