ವಿದೇಶ

ಭಾರತೀಯ ಕಂಪೆನಿಗಳಿಂದ ಮೌಲ್ಯಯುತ ಹೂಡಿಕೆ: ಅಮೆರಿಕಾ

Sumana Upadhyaya
ವಾಷಿಂಗ್ಟನ್: ಭಾರತೀಯ ಕಂಪೆನಿಗಳ ಹೂಡಿಕೆಗೆ ಮಹತ್ವ ನೀಡಲಾಗುತ್ತಿದ್ದು ಭಾರತದೊಂದಿಗೆ ಗಟ್ಟಿಯಾದ ಆರ್ಥಿಕ ಸಂಬಂಧವನ್ನು ಅಮೆರಿಕ ಬಯಸುತ್ತದೆ ಎಂದು ಹೇಳಿದೆ.
ಅಮೆರಿಕ-ಭಾರತದ ವಾಣಿಜ್ಯ ಸಂಬಂಧ ಗಟ್ಟಿಯಾಗಿ ಬೆಳೆಯಲು ನಾವು ಬಯಸುತ್ತೇವೆ ಎಂದು ಅಮೆರಿಕ ರಾಜ್ಯ ಇಲಾಖೆಯ ಕಾರ್ಯಕಾರಿ ವಕ್ತಾರ ಮಾರ್ಕ್ ಟೊನರ್ ಸುದ್ದಿಗಾರರಿಗೆ ನಿನ್ನೆ ತಿಳಿಸಿದರು. ಡೊನಾಲ್ಡ್ ಟ್ರಂಪ್ ಆಡಳಿತದ ಹೆಚ್-1ಬಿ ವೀಸಾ ಮತ್ತು ಭಾರತೀಯ ಐಟಿ ಕಂಪೆನಿಗಳ ಮೇಲೆ ಅದರ ಪರಿಣಾಮ ಕುರಿತ ಪರಾಮರ್ಶೆ ಬಗ್ಗೆ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 
ನಾವು ಭಾರತೀಯ ಕಂಪೆನಿಗಳನ್ನು ಬಹಳ ಗೌರವಿಸುತ್ತೇವೆ ಮತ್ತು ಅಮೆರಿಕ ಆರ್ಥಿಕತೆಯಲ್ಲಿ ಭಾರತದ ಹೂಡಿಕೆಯನ್ನು ಬಯಸುತ್ತೇವೆ. ಇದರಿಂದ ಸಾವಿರಾರು ಅಮೆರಿಕನ್ನರಿಗೆ ಕೂಡ ಉದ್ಯೋಗ ಸಿಗುತ್ತದೆ ಎಂದು ಟೊನರ್ ಹೇಳಿದರು. ವೀಸಾಕ್ಕೆ ಇರುವ ಹೊಸ ಅಗತ್ಯಗಳ ಕುರಿತು ನಾನು ಪರಿಶೀಲಿಸುತ್ತೇನೆ ಎಂದರು. ಅಮೆರಿಕಾದ ಹೊಸ ಸರ್ಕಾರದಲ್ಲಿ ವೀಸಾ ಸಂದರ್ಶನ ಮತ್ತು ಪ್ರವೇಶ ಪ್ರಕ್ರಿಯೆಗಳ ಹೊಸ ವಿಧಾನಗಳನ್ನು ಅಮೆರಿಕಾ ಹುಡುಕುತ್ತಿದೆ ಎಂದರು.
ನಿನ್ನ ಅಮೆರಿಕಾ ಭೇಟಿ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಹೆಚ್-1ಬಿ ವೀಸಾಕ್ಕೆ ತಡೆ ನೀಡುವುದರಿಂದ ಭಾರತೀಯ ಐಟಿ ಉದ್ಯೋಗಿಗಳಿಗೆ ತೊಂದರೆಯಾಗುತ್ತದೆ. ಅಮೆರಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯ ಐಟಿ ಕಂಪೆನಿಗಳು ಮತ್ತು ಉದ್ಯೋಗಿಗಳ ಪಾತ್ರವನ್ನು ಜೇಟ್ಲಿ ಅಲ್ಲಿನ ಹಣಕಾಸು ಸಚಿವ ಸ್ಟೀವನ್ ಮನ್ಚಿನ್ ಅವರೊಂದಿಗೆ ಹೇಳಿಕೊಂಡಿದ್ದರು.
SCROLL FOR NEXT