ವಿದೇಶ

ಪಾಕಿಸ್ತಾನದ ತಾಲೀಬಾನ್ ನಾಯಕನಿಗೆ ರಾ ರಕ್ಷಣೆ: ಉಗ್ರ ಸಂಘಟನೆಯ ಮಾಜಿ ವಕ್ತಾರ

Srinivas Rao BV
ಇಸ್ಲಾಮಾಬಾದ್: ತಾಲೀಬಾನ್ ಉಗ್ರ ಸಂಘಟನೆಯ ವಿಘಟಿತ ಸಂಘಟನೆಯಾದ ಜಮಾತ್-ಉಲ್- ಅಹ್ರಾರ್(ಜೆಯುಎ) ಉಗ್ರ ಸಂಘಟನೆಯ ಮಾಜಿ ವಕ್ತಾರ ಎಹನ್ಸುಲ್ಲಾ ಎಹ್ಸಾನ್ ಹೇಳಿಕೆಯಿರುವ ವಿಡಿಯೋವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. 
ತಾಲೀಬಾನ್ ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ರಾ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿರುವ ವಿಡಿಯೋ ದೃಶ್ಯವನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಅಫ್ಘಾನಿಸ್ತಾನ ಹಾಗೂ ಭಾರತದ ಗುಪ್ತಚರ ಇಲಾಖೆಗಳಾದ ಎನ್ ಡಿಎಸ್ ಮತ್ತು ರಾ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನಿ ತಾಲೀಬಾನ್ ಅಥವಾ ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು ಹಾಗೂ ಅದರ ನಾಯಕನಿಗೆ ರಕ್ಷಣೆ ನೀಡುತ್ತಿವೆ ಎಂದು ಎಹನ್ಸುಲ್ಲಾ ಎಹ್ಸಾನ್ ಆರೋಪಿಸಿದ್ದಾನೆ. 
ಎಹನ್ಸುಲ್ಲಾ ಎಹ್ಸಾನ್ ತಾಲೀಬಾನ್ ಉಗ್ರ ಸಂಘಟನೆಯ ವಿಘಟಿತ ಸಂಘಟನೆಯಾದ ಜಮಾತ್-ಉಲ್- ಅಹ್ರಾರ್(ಜೆಯುಎ) ಉಗ್ರ ಸಂಘಟನೆಯ ಮಾಜಿ ವಕ್ತಾರನಾಗಿದ್ದು, ಜೆಯುಎ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಕಳೆದ 2 ವರ್ಷಗಳಿಂದ ಪಾಕಿಸ್ತಾನದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿದೆ. 
ಎಹನ್ಸುಲ್ಲಾ ಎಹ್ಸಾನ್ ಹೇಳಿಕೆಯನ್ನೇ ಹಿಡಿದುಕೊಂಡು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸೇನಾ ಮೇಜರ್ ಜನರಲ್ ಆಸೀಫ್ ಘಫೂರ್ "ಎಹನ್ಸುಲ್ಲಾ ಎಹ್ಸಾನ್ ಹೇಳಿಕೆ ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಯತ್ನಗಳನ್ನು ಬಯಲು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ. 
SCROLL FOR NEXT