ಸಾವನ್ನಪ್ಪಿದ 4 ತಿಂಗಳ ಮಗು ರೋಹನ್
ನವದೆಹಲಿ: ನೋಯ್ಡಾದ ಜಾಯಪ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ 4 ತಿಂಗಳ ಮಗು ಪಾಕಿಸ್ತಾನದಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ರೋಹನ್ ಗೆ ಇತ್ತೀಚೆಗಷ್ಟೇ ನೋಯ್ಡಾದಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿತ್ತು, ನಂತರ ಆತನ ಪೋಷಕರು ಪಾಕಿಸ್ತಾನಕ್ಕೆ ಮಗುವಿನ ಜತೆ ತೆರಳಿದ್ದರು. ಆದರೆ ಕಳೆದ ರಾತ್ರಿ ನಿರ್ಲೀಕರಣದಿಂದಾಗಿ ರೋಹನ್ ಸಾವನ್ನಪ್ಪಿದ್ದಾನೆ ಎಂದು ಆತನ ತಂದೆ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿದ ಎಲ್ಲಾ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ.
ಜುಲೈ 12 ರಂದು ರೋಹನ್ ನನ್ನು ಭಾರತಕ್ಕೆ ಕರೆ ತರಲಾಗಿತ್ತು, ಜುಲೈ 14 ರಂದು ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರ ಐಸಿಯು ಗೆ ಶಿಫ್ಟ್ ಮಾಡಲಾಗಿತ್ತು. ಪೂರ್ಣವಾಗಿ ಗುಣಮುಖವಾದ ನಂತರ ರೋಹನ್ ತವರಿಗೆ ಮರಳಿದ್ದ. ಇದಾದ ನಂತರ ಸುಷ್ಮಾ ಸ್ವರಾಜ್ ಕೂಡ ಪಾಕಿಸ್ತಾನಿ ಮಗುವಿನ ಜೊತೆ ಇರುವ ಫೋಟೋ ಟ್ವೀಟ್ ಮಾಡಿದ್ದರು.