ವಿದೇಶ

ತಮ್ಮನ್ನು ಅನರ್ಹಗೊಳಿಸಿದ್ದು ದೊಡ್ಡ 'ಜೋಕ್': ನವಾಜ್ ಷರೀಫ್

Lingaraj Badiger
ಇಸ್ಲಾಮಾಬಾದ್: ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಸಂಸತ್ ಸದಸ್ಯ ಸ್ಥಾನದಿಂದ ಸುಪ್ರೀಂ ಕೋರ್ಟ್ ಅನರ್ಹಗೊಳಿಸಿರುವುದು ಒಂದು ಜೋಕ್ ಎಂದಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು, ಮತ್ತೆ ನಾಲ್ಕನೇ ಬಾರಿ ಪಾಕ್ ಪ್ರಧಾನಿಯಾಗುವುದಾಗಿ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಸ್ಲಾಮಾಬಾದ್ ನಿಂದ ಲಾಹೋರ್ ಯಾತ್ರೆಯ ಮೂರನೇ ದಿನವಾದ ಇಂದು ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್ ಅವರು, ತಮ್ಮನ್ನು ಅನರ್ಹಗೊಳಿಸಿದ ನ್ಯಾಯಾಧೀಶರಿಗೆ ತಮ್ಮ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಉದಾಹರಣೆ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
'ಅವರು ಪೇಪರ್ ನಲ್ಲಿ ನನ್ನನ್ನು ಪ್ರಧಾನಿ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ಆದರೆ ನಿಮ್ಮ ಮನಸಿನಿಂದ ಕಿತ್ತು ಹಾಕಿಲ್ಲ. ಜನರ ಮನಸಿನಿಂದ ನನ್ನನ್ನು ಕಿತ್ತುಹಾಕಲು ಸಾಧ್ಯವೆ?' ಎಂದು ಮಾಜಿ ಪ್ರಧಾನಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಪ್ರಶ್ನಿಸಿದ್ದಾರೆ.
ನವಾಜ್ ಷರೀಫ್ ಹಾಗೂ ಅವರ ಕುಟುಂಬದ ವಿರುದ್ಧದ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕ್ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ನವಾಜ್ ಷರೀಫ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿತ್ತು. ಹೀಗಾಗಿ ಅವರು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
SCROLL FOR NEXT