ಬೀರುತ್: ಸ್ಪೇನ್ ನ ಬಾರ್ಸಿಲೋನಾ ನಗರದಲ್ಲಿ ಕಳೆದ ಗುರುವಾರ ನಡೆದ ಭೀಕರ ಉಗ್ರ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತು ಕೊಂಡಿದೆ.
ಇಸ್ಲಾಮಿಕ್ ಸಂಘಟನೆಯ ಯೋಧರೇ ಈ ದಾಳಿ ನಡೆಸಿದ್ದಾರೆ ಉಗ್ರ ಸಂಘಟನೆಯ ಮುಖವಾಣಿ ಆಮಾಖ್ ಹೇಳಿಕೊಂಡಿದೆ.
ಇನ್ನು ಬಾರ್ಸಿಲೋನಾದ ಲಾಸ್ ರಾಂಬ್ಲಾಸ್ ಪ್ರವಾಸಿ ತಾಣದಲ್ಲಿ ದಾಳಿ ನಡೆಸಿದ ಉಗ್ರರ ಪೈಕಿ ಇಬ್ಬರು ಉಗ್ರರ ಮೂಲವನ್ನು ಪೊಲೀಸರು ಶೋಧಿಸಿದ್ದು, ಓರ್ವ ಮೊರಾಕ್ಕೋ ಮೂಲದವನು ಎಂದು ತಿಳಿದುಬಂದಿದೆ. ಮತ್ತೋರ್ವ ಉಗ್ರನನ್ನು ಸ್ಪೇನ್ ನ ಉತ್ತರ ಆಫ್ರಿಕನ್ನರೇ ಹೆಚ್ಚಾಗಿ ವಾಸವಿರುವ ಮೆಲಿಲಾ ಪ್ರದೇಶದ ನಿವಾಸಿ ಎಂದು ಗುರುತಿಸಿದ್ದಾರೆ.