ಸಂಗ್ರಹ ಚಿತ್ರ 
ವಿದೇಶ

ಅಪಘಾತ: ಅಮೆರಿಕ ಯುದ್ಧ ನೌಕೆಗೆ ಇಂಧನ ಟ್ಯಾಂಕರ್ ಢಿಕ್ಕಿ, 10 ಮಂದಿ ನಾಪತ್ತೆ, 5 ನಾವಿಕರಿಗೆ ಗಾಯ

ಯುಎಸ್ಎಸ್ ಫಿಟ್ಜ್ ಗರಾಲ್ಡ್ ಬಳಿಕ ಅಮೆರಿಕದ ಮತ್ತೊಂದು ಯುದ್ಧ ನೌಕೆ ಅಪಘಾತಗೀಡಾಗಿದ್ದು, ಸಿಂಗಾಪುರದಲ್ಲಿ ಯುಎಸ್ಎಸ್ ಜಾನ್ ಎಸ್ ಮೆಕೇನ್ ನೌಕೆ ಆಯಿಲ್ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಸಿಂಗಾಪುರ: ಯುಎಸ್ಎಸ್ ಫಿಟ್ಜ್ ಗರಾಲ್ಡ್  ಬಳಿಕ ಅಮೆರಿಕದ ಮತ್ತೊಂದು ಯುದ್ಧ ನೌಕೆ ಅಪಘಾತಗೀಡಾಗಿದ್ದು, ಸಿಂಗಾಪುರದಲ್ಲಿ ಯುಎಸ್ಎಸ್ ಜಾನ್ ಎಸ್ ಮೆಕೇನ್ ನೌಕೆ ಆಯಿಲ್ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಪರಿಣಾಮ ಅಮೆರಿಕದ ಯುದ್ಧ ನೌಕೆಯಲ್ಲಿದ್ದ 10 ಮಂದಿ ನಾವಿಕರು ನಾಪತ್ತೆಯಾಗಿದ್ದು, 5 ನಾವಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.  ಸಿಂಗಾಪುರ ಬಂದರಿನಿಂದ ಕೂಗಳತೆ ದೂರದಲ್ಲೇ ಈ ದುರಂತ  ಸಂಭವಿಸಿದ್ದು, ಸೋಮವಾರ ಮುಂಜಾನೆ ಯುಎಸ್ಎಸ್ ಜಾನ್ ಎಸ್ ಮೆಕೇನ್ ನೌಕೆಗೆ ಲೈಬಿರಿಯಾ ಧ್ವಜ ಹೊಂದಿದ್ದ ಆಯಿಲ್ ಟ್ಯಾಂಕರ್ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ವಿಚಾರ ತಿಳಿಯುತ್ತಿದ್ದಂತೆಯೇ  ಸಿಂಗಾಪುರ ನೌಕಾದಳದ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದು, ನಾಪತ್ತೆಯಾಗಿರುವ ನಾವಿಕರ ಹುಡುಕಾಟಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇನ್ನು ಗಾಯಾಳು ನಾವಿಕರಿಗೆ ಸಿಂಗಾಪುರ ಬಂದರಿನಲ್ಲಿರುವ ಆಸ್ಪತ್ರೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಅಮೆರಿಕ ನೌಕಾದಳಕ್ಕೂ ಕೂಡ ವಿಚಾರ ಮುಟ್ಟಿಸಲಾಗಿದ್ದು, ಅಮೆರಿಕದ ನೌಕಾಪಡೆಯ ವಿಶೇಷ ಹೆಲಿಕಾಪ್ಟರ್ ಸೀ ಹಾಕ್  ಮತ್ತು ಇತರೆ ಶೋಧ ಕಾರ್ಯಾಚರಣೆಗೆ ಬಳಸಲಾಗುವ ನೌಕೆಗಳನ್ನು ಸಿಂಗಾಪುರಕ್ಕೆ ರವಾನಿಸಲಾಗುತ್ತಿದೆ. ನಾಪತ್ತೆಯಾಗದಿರುವ ನಾವಿಕರ ಹುಡುಕಾಟ ಭರದಿಂದ ಸಾಗಿದೆ ಎಂದು ಸಿಂಗಾಪುರ ನೌಕಾದಳದ ಅಧಿಕಾರಿಗಳು  ತಿಳಿಸಿದ್ದಾರೆ.

ಕೇವಲ 2 ತಿಂಗಳ ಅವಧಿಯಲ್ಲಿ ಅಮೆರಿಕದ ಎರಡು ಯುದ್ಧ ನೌಕೆಗಳು ಅಪಘಾತಕ್ಕೀಡಾಗಿದ್ದು, ಇಂದು ಸಂಭವಿಸಿದ ಯುಎಸ್ಎಸ್ ಜಾನ್ ಎಸ್ ಮೆಕೇನ್ ನೌಕೆಯ ಅಪಘಾತ ಎರಡನೆಯ ಅಪಘಾತವಾಗಿದೆ. ಈ ಹಿಂದೆ ಕಳೆದ  ಜೂನ್ ನಲ್ಲಿ ಇದೇ ಅಮೆರಿಕದ ಯುಎಸ್ಎಸ್ ಫಿಟ್ಜ್ ಗರಾಲ್ಡ್ ಜಪಾನ್ ನ ಇಂಧನ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಅಮೆರಿಕದ ಅತ್ಯಾಧುನಿಕ ಯುದ್ಧ ನೌಕೆ ಯುಎಸ್ಎಸ್ ಫಿಟ್ಜ್ ಗರಾಲ್ಡ್ ಗಂಭೀರವಾಗಿ  ಹಾನಿಗೊಳಗಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹದಲ್ಲಿ 19 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರದಲ್ಲಿ ಕಟ್ಟೆಚ್ಚರ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

ಲಾಲ್ ಬಾಗ್-ಕಬ್ಬನ್ ಪಾರ್ಕ್ ನ 22 ಎಕರೆ ಜಾಗ ಪರಭಾರೆ?, ಬೆಂಗಳೂರಿನ ಪಾರ್ಕ್‌ಗಳಿಗೆ ಹೊಸ ಕಾಯ್ದೆ ಕಂಟಕ?; ರಾಜ್ಯಪಾಲರಿಗೆ ಸಂಸದ Tejasvi Surya ಪತ್ರ

2ನೇ ಟೆಸ್ಟ್ ಮೇಲೆ ಭಾರತ ಬಿಗಿ ಹಿಡಿತ: ಮಳೆಕಾಟದಿಂದ 4ನೇ ದಿನದಾಟ ಬೇಗನೇ ಅಂತ್ಯ

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್: ಭಾರತಕ್ಕೆ ವಿಕೆಟ್ ಅಗತ್ಯವಿದ್ದಾಗ 'ಅದ್ಬುತ ಕ್ಯಾಚ್' ಹಿಡಿದ ಶುಭಮನ್ ಗಿಲ್! Video