ಪೆಶಾವರ: ಮಹಾಮಾರಿ ಡೆಂಘೀ ಜ್ವರದಿಂದಾಗಿ ಪಾಕಿಸ್ತಾನದಲ್ಲಿ 7 ಮಂದಿ ಬಲಿಯಾಗಿದ್ದು, 1,500 ಜನರದಲ್ಲಿ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಡಂಘೀ ಜ್ವರಕ್ಕೆ ಬಲಿಯಾದವರು ಹಾಗೂ ಸೋಂಕಿನಿಂದ ಬಳಲುತ್ತಿರುವ ಕುರಿತಂತೆ ಇದೇ ಮೊಲದ ಬಾಲಿಕೆ ಅಧಿಕಾರಿಗಳು ವರದಿಗಳನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಖೈರಬ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಡೆಂಘೀ ಜ್ವರಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
ಡೆಂಘೀ ಸೋಂಕು ಕುರಿತಂತೆ ಈ ವರೆಗೂ ಸಾವಿರಾರು ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, 1,547 ಜನರನ್ನು ಸೋಂಕು ಪತ್ತೆಯಾಗಿದೆ. ಇದರಲ್ಲಿ 560 ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನರಲ್ಲಿ ಡೆಂಘೀ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಖೈಬರ್ ಪಖ್ತುಂಖ್ವಾ ಪರ್ವೇಜ್ ಖಟ್ಟಕ್ ಹಾಗೂ ಆರೋಗ್ಯ ಸಚಿವ ಶಾಹ್ರಾಮ್ ತರಾಕೈ ಅವರು ಪಖ್ತುಂಖ್ವಾ ಪ್ರಾಂತ್ಯಕ್ಕೆ ಭೇಟಿ ನೀಡಿದ್ದು, ಡೆಂಘೀ ಜ್ವರಕ್ಕೆ ಬಲಿಯಾದವರಿಗೆ ರೂ.50 ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.