ಸಿಯೋಲ್: ಭ್ರಷ್ಟಾಚಾರ ಹಾಗೂ ಹಲವು ಹಗರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಅತೀ ಶ್ರೀಮಂತ ಉದ್ಯಮಿ ಹಾಗೂ ಸ್ಯಾಮ್ ಸಂಗ್ ಅಧ್ಯಕ್ಷ ಜೇ ವೈಲೀ ಅವರಿಗೆ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಜೇ ವೈಲೀ ಅವರು ತಪ್ಪಿತಸ್ಥರು ಎಂದು ಹೇಳಿರುವ ನ್ಯಾಯಾಲಯ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ನೀಡಿದೆ. ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಲೀ ಬಂಧಿತರಾಗಿದ್ದರು.
ಕಳೆದ ಫೆಬ್ರವರಿ ತಿಂಗಳಲ್ಲಿ 49 ವರ್ಷದ ಜೈ ವೈ ಲೀಯನ್ನು ಬಂಧಿಸಲಾಗಿದ್ದು ಅವರನ್ನು ಕೈಕೋಳದೊಂದಿಗೆ ಜಸ್ಟೀಸ್ ಮಿನಿಸ್ಟ್ರಿ ಬಸ್ ನಲ್ಲಿ ಸಿಯೋಲ್ ಸೆಂಟ್ರಲ್ ಜಿಲ್ಲಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ನ್ಯಾಯಾಲಯದ ವಿಚಾರಣೆ ವೇಳೆ ಜೇ ವೈ ಲೀ ಅವರು ತಾವು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ವಾದಿಸಿದ್ದರು. ಇನ್ನು ಕೆಲ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲಿದ್ದಾರೆ ಎಂದು ಲೀ ಪರ ವಕೀಲ ಸಾಂಗ್ ವು ಚೆಯೇಲ್ ತಿಳಿಸಿದ್ದಾರೆ.