ಡ್ರೋನ್ 
ವಿದೇಶ

ವಿದೇಶಿ ಡ್ರೋನ್‌ಗಳಿಗೆ 'ಕಂಡಲ್ಲಿ ಗುಂಡು': ಪಾಕ್ ವಾಯು ಪಡೆಗೆ ಆದೇಶ

ಅಮೆರಿಕ ಸೇರಿದಂತೆ ವಿದೇಶಿ ಡ್ರೋನ್ ಗಳು ಪಾಕಿಸ್ತಾನದ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳ ನುಸುಳಿದರೆ ಕಂಡಲ್ಲಿ ಗುಂಡಿಕ್ಕಿ ಹೊಡೆದುರುಳಿಸುವಂತೆ...

ಇಸ್ಲಾಮಾಬಾದ್: ಅಮೆರಿಕ ಸೇರಿದಂತೆ ವಿದೇಶಿ ಡ್ರೋನ್ ಗಳು ಪಾಕಿಸ್ತಾನದ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳ ನುಸುಳಿದರೆ ಕಂಡಲ್ಲಿ ಗುಂಡಿಕ್ಕಿ ಹೊಡೆದುರುಳಿಸುವಂತೆ ಪಾಕಿಸ್ತಾನ ವಾಯುಪಡೆ ಮುಖ್ಯಸ್ಥರು ತನ್ನ ಯೋಧರಿಗೆ ಖಡಕ್ ಸೂಚನೆ ಕೊಟ್ಟಿರುವುದಾಗಿ ವರದಿಯಾಗಿದೆ. 
ಅಮೆರಿಕವನ್ನು ಗುರಿಯಾಗಿರಿಸಿಕೊಂಡೇ ಪಾಕ್ ವಾಯು ಪಡೆ ಮುಖ್ಯಸ್ಥರು ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 2004ರಿಂದ ಉಗ್ರರರ ಧಮನಕ್ಕಾಗಿ ಅಮೆರಿಕ ಡ್ರೋನ್ಗಳು ಆಫ್ಘಾನ್-ಪಾಕ್ ಗಡಿಯಲ್ಲಿ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. 
ಪಾಕಿಸ್ತಾನ ವಾಯು ಪ್ರದೇಶವನ್ನು ಯಾರಾದರೂ ಅತಿಕ್ರಮಿಸಿದರೆ ನಾವು ಸಹಿಸುವುದಿಲ್ಲ ಹಾಗೂ ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ. ಹೀಗಾಗಿ ನಾನು ಪಿಎಎಫ್ ಗೆ ಅಮೆರಿಕ ಸಹಿತ ಯಾವುದೇ ವಿದೇಶಿ ಡ್ರೋನ್ ಗಳು ಪಾಕ್ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಬಂದರೆ ಅವುಗಳನ್ನು ಹೊಡೆದುರುಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಪಾಕ್ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಸೊಹೇಲ್ ಅಮನ್ ಹೇಳಿದ್ದಾರೆ. 
ಪಾಕ್-ಆಫ್ಕಾನ್ ಗಡಿಯಲ್ಲಿ ಅಮೆರಿಕ ವಾಯುಪಡೆ ಡ್ರೋನ್ ಗಳು ಇತ್ತೀಚೆಗೆ ನಡೆಸಿದ್ದ ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!