ಕೊಲಂಬೋ: ಶ್ರೀಲಂಕಾದ ಹ್ಯಾಂಬಂಟೊಟ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಲಂಕಾ ಚೀನಾಗೆ ಅಧಿಕೃತವಾಗಿ ಹಸ್ತಾಂತರಿಸಿದೆ. 99 ವರ್ಷಗಳ ಲೀಸ್ ಗೆ ನೀಡಲಾಗಿದ್ದು, ಶ್ರೀಲಂಕಾ ಬಂದರು ಪ್ರಾಧಿಕಾರ ಹಾಗೂ ಚೀನಾದ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ ಸಂಸ್ಥೆಯ ನಿರ್ವಹಣೆಯಲ್ಲಿರುವ ಹ್ಯಾಂಬಂಟೋಟ ಇಂಟರ್ನ್ಯಾಷನಲ್ ಪೋರ್ಟ್ ಗ್ರೂಪ್ (ಹೆಚ್ಐಪಿಜಿ) ಬಂದರು ಹಾಗೂ ಹ್ಯಾಂಬಂಟೊಟ ಅಂತಾರಾಷ್ಟ್ರೀಯ ಪೋರ್ಟ್ ಸರ್ವೀಸ್ ಬಂದರನ್ನು ನಿರ್ವಹಣೆ ಮಾಡಲಿವೆ.
ಏಪ್ರಿಲ್ ನಲ್ಲಿ ಚೀನಾಗೆ ಭೇಟಿ ನೀಡಿದ್ದ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈ ಒಪ್ಪಂದದ ಮೂಲಕ ನಾವು ಚೀನಾಗೆ ನೀಡಬೇಕಿರುವ ಸಾಲದ ಪರುಪಾವತಿಯನ್ನು ಪ್ರಾರಂಭಿಸಿದ್ದೇವೆ, ಹ್ಯಾಂಬಂಟೊಟ ಹಿಂದೂ ಮಹಾಸಾಗರದ ಪ್ರಮುಖ ಬಂದರಾಗಿ ಮಾರ್ಪಾಡಾಗಲಿದೆ ಎಂದು ಹೇಳಿದ್ದಾರೆ.