ವಿದೇಶ

ಸೌರ ಇಂಧನ ವಿವಾದ: ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಭಾರತದ ವಿರುದ್ಧ ಮತ್ತೆ ಕೇಸು ಹಾಕಿದ ಅಮೆರಿಕಾ

Sumana Upadhyaya
ಜೆನೆವಾ: ಸೌರ ವಿದ್ಯುತ್ ಮೇಲೆ ವಿಶ್ವ ವಾಣಿಜ್ಯ ಸಂಘಟನೆಯ ನಿಯಮವನ್ನು ಪಾಲಿಸುವಲ್ಲಿ ಭಾರತ ವಿಫಲವಾಗಿದೆ ಎಂದು ಮುಂದಿನ ತಿಂಗಳು ವಿಶ್ವ ವ್ಯಾಪಾರ ಸಂಘಟನೆಯ ವಿವಾದ ಇತ್ಯರ್ಥ ಮಂಡಳಿಗೆ ಅಮೆರಿಕಾ ತಿಳಿಸಲಿದೆ. ಈ ಮೂಲಕ ಮತ್ತೊಂದು ಸುತ್ತಿನ ದಾವೆ ಹೂಡಲಿದೆ.
ಭಾರತೀಯ ನಿರ್ಮಿತ ಸೆಲ್ಸ್  ಮತ್ತು ಮಾಡ್ಯೂಲ್ಸ್ ಗಳನ್ನು ಬಳಸಲು ಸೌರ ಶಕ್ತಿ ಅಭಿವರ್ದಕರಿಗೆ ನೀಡಲಾಗಿದ್ದ ಒಪ್ಪಂದವನ್ನು ಭಾರತ ಮುರಿದಿದ್ದು ಹೊಸ ವ್ಯಾಜ್ಯ ಆರಂಭಿಸಬೇಕಾಗಿದೆ ಎಂದು ಅಮೆರಿಕಾ ಹೇಳಿದೆ.
2011ರಲ್ಲಿ ಭಾರತ ರಾಷ್ಟ್ರೀಯ ಸೌರ ಕಾರ್ಯಕ್ರಮವನ್ನು ಆರಂಭಿಸಿತ್ತು. ಮಾಲಿನ್ಯ ನಿಯಂತ್ರಣಕ್ಕೆ ಮತ್ತು ಇಂಧನ ಕೊರತೆಯನ್ನು ನೀಗಿಸಲು ಈ ಕ್ರಮ ತೆಗೆದುಕೊಂಡಿತು.
ಆದರೆ 2013ರಲ್ಲಿ ವಿಶ್ವ ವ್ಯಾಪಾರ ಸಂಘಟನೆಗೆ ದೂರು ಸಲ್ಲಿಸಿದ ಅಮೆರಿಕಾ ಕಾರ್ಯಕ್ರಮ ತಾರತಮ್ಯವಾಗಿದ್ದು 2011ರಿಂದ ಭಾರತಕ್ಕೆ ಅಮೆರಿಕಾದಿಂದ ಸೌರ ರಫ್ತಿನಲ್ಲಿ ಶೇಕಡಾ 90ರಷ್ಟು ಕಡಿಮೆಯಾಗಿದೆ ಎಂದು ದೂರಿ ಅರ್ಜಿ ಸಲ್ಲಿಸಿತ್ತು.
SCROLL FOR NEXT