ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಶೂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ ಪಾಕ್!
ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಬೂಟುಗಳಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಇರಬಹುದೆಂದು ಶಂಕೆಯಿಂದ ಅದನ್ನು ವಿಧಿವಿಜ್ಞಾನ ಪರಿಕ್ಷೆಗಾಗಿ ಕಳಿಸಿಕೊಡಲಾಗಿತ್ತು ಎನ್ನುವ ವಿಚಾರವನ್ನು ಮಾದ್ಯಮ ವರದಿಯೊಂದು ಬಹಿರಂಗಪಡಿಸಿದೆ.
ಬೂಟಿನಲ್ಲಿ "ಲೋಹದ ವಸ್ತು" ಕ್ಯಾಮರಾ ಅಥವಾ ರೆಕಾರ್ಡಿಂಗ್ ಚಿಪ್ ಏನಾದರೂ ಇತ್ತೆ ಎನ್ನುವುದನ್ನು ಪರೀಕ್ಷಿಸಲು ಅಧಿಕಾರಿಗಳು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿತ್ತು ಎಂದು ಪಾಕಿಸ್ತಾನದ ವಿದೇಶಾಂಗ ಕಛೇರಿ (ಎಫ್ಒ) ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ ಎಂದು 'ಪಾಕಿಸ್ತಾನ ಟುಡೆ' ವರದಿ ಮಾಡಿದೆ.
ಇಸ್ಲಾಮಾಬಾದ್ ನ ವಿದೇಶಾಂಗ ಕಛೇರಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಖೈದಿಯನ್ನು ಭೇಟಿ ಮಾಡುವ ಮೊದಲು ಭದ್ರತಾ ಅಧಿಕಾರಿಗಳು ಜಾದವ್ ಅವರ ಪತ್ನಿ ಧರಿಸಿದ್ದ ಬೂಟುಗಳಲ್ಲಿ "ಲೋಹದ ವಸ್ತುವನ್ನು" ಪತ್ತೆಹಚ್ಚಲಾಗಿದೆ ಎಂದು ವಿದೇಶಾಂಗ ಕಛೇರಿ ದೃಢಪಡಿಸಿದೆ ಎಂದು ಡಾನ್ ಒಂದು ಪ್ರತ್ಯೇಕ ವರದಿಯಲ್ಲಿ ಹೇಳಿದೆ. ಜಾಧವ್ ಅವರ ಪತ್ನಿಯ ಬೂಟುಗಳನ್ನು ತಪಾಸಣೆಗಾಗಿ ತೆಗೆದುಕೊಂಡ ವೇಳೆ ಅವರಿಗೆ ಪರ್ಯಾಯ ಪಾದರಕ್ಷೆಗಳನ್ನು ನೀಡಲಾಗಿತ್ತು. ಇನ್ನು ಆಕೆ ಧರಿಸಿದ್ದ ಆಭರಣಗಳು ಸೇರಿದಂತೆ ಎಲ್ಲಾ ಇತರ ವಸ್ತುಗಳನ್ನೂ ಹಿಂತಿರುಗಿಸಲಾಗಿದೆ.
ಕಳೆದ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪಾಕ್ ವಿದೇಶಾಂಗ ಸಚಿವಾಲಯವು ಬೂಟುಗಳಲ್ಲಿ "ಲೋಹದ ವಸ್ತು" ಇರುವ ಬಗೆಗೆ ಉಲ್ಲೇಖಿಸಿಲ್ಲ ಬದಲಿಗೆ ಅದರಲ್ಲಿ "ಯಾವುದೋ ವಸ್ತು" ಇತ್ತೆಂದಷ್ಟೇ ಹೇಳಿದ್ದರು. ಪಾಕಿಸ್ತಾನ ಅಧಿಕಾರಿಗಳು ಜಾಧವ್ ಅವರ ಹೆಂಡತಿ ಮತ್ತು ತಾಯಿಗೆ ಕಿರುಕುಳ ನಿಡಿದ್ದಾರೆ ಎನ್ನುವ ಭಾರತದ ಹೇಳಿಕೆ ಆಧಾರರಹಿತವಾಗಿದೆ. ಪತ್ನಿ ಧರಿಸಿದ್ದ ಬುಟು ಹಾಗೂ ಆಭರಣಗಳನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಬೂಟಿನಲ್ಲಿ "ಯಾವುದೋ ವಸ್ತು" ಪತ್ತೆಯಾಗಿತ್ತು ಎಂದು ಪಾಕಿಸ್ತಾನ ವಿದೇಶಂಗ ಕಛೇರಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos