ವಿದೇಶ

ಚಿಕಾಗೊ: ಲಂಚ ಸ್ವೀಕಾರ ಪ್ರಕರಣದಲ್ಲಿ ದೋಷಿ ಎನಿಸಿದ ಭಾರತೀಯ ಮೂಲದ ವೈದ್ಯ

Sumana Upadhyaya
ಚಿಕಾಗೊ: ಉದ್ಯಮದಲ್ಲಿ ಲಕ್ಷಗಟ್ಟಲೆ ಡಾಲರ್ ನೀಡುವುದಾಗಿ ನಂಬಿಸಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಚಿಕಾಗೊ ಉಪ ನಗರದಲ್ಲಿರುವ ಭಾರತೀಯ ಮೂಲದ ವೈದ್ಯ ನೀಲ್ ಶರ್ಮಾ ಅವರನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಫೆಡರಲ್ ನ್ಯಾಯಾಧೀಶ ಫ್ರೆಡ್ರಿಕ್ ಜೆ.ಕಪಾಲಾ ಅವರ ಮುಂದೆ ಹಾಜರಾದ ಶರ್ಮಾ 2015ರಲ್ಲಿ ಕಂಪೆನಿಯೊಂದಕ್ಕೆ ರೋಗಿಗಳನ್ನು ಕಳುಹಿಸಿಕೊಡಲು 10,000 ಡಾಲರ್ ಲಂಚ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮ್ಯಾನೇಜ್ಡ್ ಕೇರ್ ಸೇವಾ ಕಂಪೆನಿಯ ವೈದ್ಯಕೀಯ ನಿರ್ದೇಶಕರಾಗಿದ್ದ 36 ವರ್ಷದ ನೀಲ್ ಶರ್ಮಾ, ಕೌಶಲ್ಯಭರಿತ ನರ್ಸಿಂಗ್ ಸೇವೆಗಳನ್ನು ಒದಗಿಸಲು ಇಲ್ಲಿನೊಯಿಸ್ ಕಂಪೆನಿ ಜೊತೆಗೆ ಗುತ್ತಿಗೆ ಹೊಂದಿದ್ದರು. ಅಲ್ಲಿನ ರೋಗಿಗಳು ಎರಡು ಸರ್ಕಾರಿ ಆರೋಗ್ಯ ವಿಮಾ ಯೋಜನೆಗಳನ್ನು ಒಳಗೊಂಡಿದ್ದರು. ಅಲ್ಲಿನ ಹಿರಿಯ ನಾಗರಿಕರು ಮತ್ತು ಬಡವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಶರ್ಮಾ ಅವರ ಕಂಪೆನಿ ಇತರ ಮೂರು ಕಂಪೆನಿಗಳ ಜೊತೆ ಕೂಡ ಒಪ್ಪಂದ ಮಾಡಿಕೊಂಡಿತ್ತು. 
ಲಂಚ ಕೊಟ್ಟ ಮತ್ತು ಕಂಪೆನಿಯಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಆಪಾದಿತ ಎಂದು ನ್ಯಾಯಾಲಯ ಹೇಳಿಲ್ಲ.
SCROLL FOR NEXT