ಸೌದಿ ಅರೇಬಿಯಾದಿಂದ 160 ಪಾಕಿಸ್ತಾನಿಗರ ಗಡಿಪಾರು
ಅಕ್ರಮವಾಗಿ ನೆಲೆಸಿದ್ದ 160 ಮಂದಿ ಪಾಕಿಸ್ತಾನಿಗರನ್ನು ಸೌದಿ ಅರೇಬಿಯಾ ಗಡಿಪಾರು ಮಾಡಿದೆ...
ಇಸ್ಲಾಮಾಬಾದ್: ಅಕ್ರಮವಾಗಿ ನೆಲೆಸಿದ್ದ 160 ಮಂದಿ ಪಾಕಿಸ್ತಾನಿಗರನ್ನು ಸೌದಿ ಅರೇಬಿಯಾ ಗಡಿಪಾರು ಮಾಡಿದೆ.
ವಿಶೇಷ ವಿಮಾನ ಮೂಲಕ 160 ಮಂದಿಯನ್ನು ಪಾಕಿಸ್ತಾನದ ಬೆನಜೀರ್ ಭುಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿದೆ ಎಂದು ದುನ್ಯಾ ನ್ಯೂಸ್ ವರದಿ ಮಾಡಿದೆ.
ಸೌದಿಯಿಂದ ಗಡಿಪಾರುಗೊಂಡಿರುವ ಪಾಕಿಸ್ತಾನಿಗರನ್ನು ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ವಲಸೆ ಅಧಿಕಾರಿಗಳು ಪರಿಶೀಲನೆ ಬಳಿಕ ವಶಕ್ಕೆ ಪಡೆದರು.
2012-2015ರಲ್ಲಿ ಸುಮಾರು 2.50 ಲಕ್ಷ ಪಾಕಿಸ್ತಾನಿಗರನ್ನು ವಿವಿಧ ದೇಶಗಳು ಗಡಿ ಪಾರು ಮಾಡಿದೆ. ಸೌದಿ ಅರೇಬಿಯಾ 1.31.643 ಮಂದಿ, ಯುಎಇ 32,458 ಮಂದಿ, ಇರಾನ್ 28, 684, ಒಮನ್ 17,248, ಗ್ರೀಸ್ 14,145, ಯುಕೆ 9,778 ಮತ್ತು ಮಲೇಷ್ಯಾ 8,861 ಪಾಕಿಸ್ತಾನಿಗರನ್ನು ಗಡಿಪಾರು ಮಾಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.