ವಿದೇಶ

ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ; ಐವರ ಸಾವು

Guruprasad Narayana
ಪೇಶಾವರ್: ನೈಋತ್ಯ ಪಾಕಿಸ್ತಾನದ ಬುಡಕಟ್ಟು ಪ್ರದೇಶದ ಆಡಳಿತ ಮುಖ್ಯಕಚೇರಿ ಗುರಿಯಾಗಿಟ್ಟುಕೊಂಡು ನಡೆಸಿದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಮೂವರು ಪೊಲೀಸರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ದಿನದ ಕೆಲಸದ ಆರಂಭದಲ್ಲಿ ಘಾಲನೈನ ಬುಡಕಟ್ಟು ಮುಖ್ಯಕಚೇರಿಯ ಮುಖ್ಯ ದ್ವಾರದ ಬಳಿ ಆತ್ಮಹತ್ಯಾ ಬಾಂಬರ್ ಸ್ಫೋಟಗೊಂಡಿದ್ದಾನೆ ಎಂದು ಪ್ರಾದೇಶಿಕ ಸರ್ಕಾರದ ಅಧಿಕಾರಿ ಹಮೀದುಲ್ಲ ಖಾನ್ ಹೇಳಿದ್ದಾರೆ. 
ಸದ್ಯಕ್ಕೆ ಯಾರು ಈ ದಾಳಿಯ ಹೊಣೆ ಹೊತ್ತಿಲ್ಲ. ಈ ಸ್ಫೋಟದ ನಂತರ ಗುಂಡಿನ ಚಕಮಕಿ ನಡೆದಿದ್ದಾಗಿ ಖಾನ್ ಹೇಳಿದ್ದಾರೆ. ಈ ಬಾಂಬರ್ ಜೊತೆಗೆ ಮತ್ತೊಬ್ಬ ಭಯೋತ್ಪಾದಕ ಜೊತೆಗಿದ್ದು ಅವನು ಕಾಂಪೌಂಡ್ ಹಾರಲು ಪ್ರಯತ್ನಿಸಿದಾಗ ಭದ್ರತಾ ಪಡೆ ಅವನ ಮೇಲೆ ಗುಂಡು ಹಾರಿಸಿತು ಎಂದು ಪಾಕಿಸ್ತಾನಿ ಸೇನೆ ಹೇಳಿದೆ. 
ಸೋಮವಾರ ನಡೆದಿದ್ದ ಮತ್ತೊಂದು ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ಲಾಹೋರ್ ನಲ್ಲಿ ೧೩ ಜನ ಮೃತಪಟ್ಟಿದ್ದರು. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯನ್ನು ಇದು ಸೂಚಿಸುತ್ತದೆ.
ಲಾಹೋರ್ ದಾಳಿಗೆ ಪಾಕಿಸ್ತಾನಿ ತಾಲಿಬಾನ್ ನಿಂದ ಒಡೆದು ಸಂಘಟನೆ ಮಾಡಿಕೊಂಡಿರುವ ಜಮಾತ್-ಉಲ್-ಅಹ್ರಾರ್ ಹೊಣೆ ಹೊತ್ತಿತ್ತು. ಈ ದಾಳಿಯಲ್ಲಿ ಏಳು ಜನ ಪೊಲೀಸರು ಮೃತಪಟ್ಟಿದ್ದರು. 
SCROLL FOR NEXT